ಸುಮಾರು ೫೦ ಪ್ರಸಂಗಗಳ ಸ್ಕ್ಯಾನ್‌ ಆಗಿ ಮೊದಲ ಪ್ರಸಂಗ ಪ್ರತಿ ಸ್ಕ್ಯಾನ್‌ ಕಮ್ಮಟ ಸಂಪನ್ನಬರೇ ೫ ಜನರ ಸ್ವಯಂಸೇವೆ ಸಿಕ್ಕರೂ ಸುಮಾರು ೫೦ ಪ್ರಸಂಗಗಳ ಸ್ಕ್ಯಾನ್‌ ಒಮ್ಮೆಲೇ ಆಗಿಹೋಗುವ ಮೂಲಕ ಮೊದಲ ಪ್ರಸಂಗಸ್ಕ್ಯಾನ್‌ ಕಮ್ಮಟವು ಫಲಕಾರಿಯಾಗಿ ಸಂಪನ್ನವಾಯಿತು.

ಲ. ನಾ. ಭಟ್ಟರ ಸಂಗ್ರಹದಲ್ಲಿನ ನೂರಕ್ಕಿಂತ ಹೆಚ್ಚು ಪ್ರಸಂಗಗಳಲ್ಲಿ ಇನ್ನೂ ಐವತ್ತು ಉಳಿದೇ ಹೋಯಿತು. ಐದೇ ಜನರಿದ್ದ ಕಾರಣ ಲ. ನಾ. ಭಟ್ಟರ ಮನೆಯಲ್ಲೇ ಉಳಿದೆವು, ಕ್ಲಬ್‌ ಹೌಸಿಗೆ ಹೋಗುವ ಯೋಜನೆಯನ್ನು ಬದಿಗಿಟ್ಟೆವು. ಸುಮಾರು ೪ ಗಂಟೆಗಳ ಕಾಲ ನಡೆದ ಸೇವೆಯಲ್ಲಿ ಸರಾಸರಿಯಾಗಿ ಒಬ್ಬೊಬ್ಬರು ಹತ್ತು ಪ್ರಸಂಗ ಸ್ಕ್ಯಾನ್‌ ಮಾಡಿದೆವು, ಉಳಿದ ಸಮಯದಲ್ಲಿ ರಾಗಿ ಮಾಲ್ಟ್‌, ಚಾ, ಚಕ್ಕುಲಿ, ಕೋಡುಬಳೆ, ಮುಂಡಕ್ಕಿ ಉಪ್ಕರಿ, ಚಾಕಲೇಟುಗಳ ಸೇವೆ (ಸೇವನೆ) ಮಾಡುತ್ತಾ ಯಕ್ಷಗಾನದ ವಿದ್ಯಮಾನಗಳ ಸುತ್ತ ಹರಟುತ್ತಾ ದಣಿವಾಗದೇ ಕಳೆದೆವು, ಮುಂದಿನ ಕಮ್ಮಟವನ್ನು ಮತ್ತೆ ನಿರೀಕ್ಷಿಸುವಷ್ಟು ಯಶಸ್ಸನ್ನು ಕಂಡೆವು. ಲ. ನಾ. ಭಟ್ಟರ ಜೊತೆಗೆ ಅವರ ಯಕ್ಷಪ್ರೇಮಿ ಸ್ನೇಹಿತ ಉಲ್ಲಾಸ್‌ ಇದ್ದರು. ಯಕ್ಷವಾಹಿನಿಯ ಖಾಯಂ ಸ್ವಯಂಸೇವಕರಾದ  ಅಶ್ವಿನಿ ಹೊದಲ, ವಸುಮತಿ, ಮತ್ತು ನಟರಾಜ ಉಪಾಧ್ಯರೂ ಸೇರಿದರು. ಲ.ನಾ. ಭಟ್ಟರ ತಾಯಿ ಮತ್ತು ಮಡದಿ ಅವರು ಚಾ ತಿಂಡಿಗಳ ಮೂಲಕ ಸೇರಿದವರ ಅತಿಥಿ ಸತ್ಕಾರವನ್ನು ಯಥೇ‍ಚ್ಛವಾಗಿ ಮಾಡಿದರು, ಲ. ನಾ. ಭಟ್ಟರು ಇಬ್ಬರು ಕುವರರು ಲವ ಕುಶರಂತೆ ಲೀಲೆಗಳಿಂದ ರಂಜಿಸಿದರು. ಈ ಕಮ್ಮಟದ ಸುತ್ತ ಸಾಕಷ್ಟು ದುಡಿದ ಎಲ್ಲರಿಗೂ ವಿಶೇಷವಾಗಿ ಆತಿಥೇಯರಿಗೆ ಧನ್ಯವಾದಗಳು.
ಆತಿಥೇಯರನ್ನು ಗುರುತಿಸಿ.

ಇನ್ನೂ ಸ್ವಯಂಸೇವಕರು ಬಂದಿದ್ದರೆ ನಮ್ಮ ಬತ್ತಳಕೆಯಲ್ಲಿ ಇನ್ನೂ ೧೫೦ ಪ್ರಸಂಗಗಳು ಕಾದುಕೊಂಡು ಇದ್ದವು, ಅವುಗಳ ಸ್ಕ್ಯಾನಿಂಗಿಗಾಗಿ ಕೂಡಲೇ ಇನ್ನೊಂದು ಕಮ್ಮಟವನ್ನು ಮಾಡುವ ಬಯಕೆ ನಮ್ಮದು, ಸ್ವಯಂಸೇವಕರು ನಮ್ಮನ್ನು ಮುಂದಿನ ಬಾರಿ ಸೇರುವಿರಾ? ಮುಂದಿನ ಬಾರಿ ನಗರದ ಮಧ್ಯಕ್ಕೆ ಹತ್ತಿರವಾಗಿಯೇ ಈ ಕಮ್ಮಟವನ್ನು ಏರ್ಪಡಿಸುವೆವು.
ಪ್ರಸಂಗ ಸ್ಕ್ಯಾನಿಂಗ್‌ ವೀರರು

ಇನ್ನು ಕೆಲವೇ ದಿನಗಳಲ್ಲಿ ಇಲ್ಲಿ ಸ್ಕ್ಯಾನ್‌ ಮಾಡಿದ ಪ್ರಸಂಗಗಳು ನಿಮಗೆ ನಮ್ಮ ಸಂಗ್ರಹದ ಮೂಲಕ ಪೂರ್ಣವಾಗಿ ಲಭ್ಯ.

ಈ ಕೆಳಗಿನ ಕೊಂಡಿಯ ಮೂಲಕ ನಮ್ಮ ಈವರೆಗಿನ ಪ್ರಸಂಗಪ್ರತಿಗಳ ಸಂಗ್ರಹ ನೋಡಿರಿ.
ಪ್ರಸಂಗಪ್ರತಿಸಂಗ್ರಹ ಕೋಷ್ಟಕಕ್ಕಾಗಿ ಕೊಂಡಿ ಇದುಇದನ್ನೇ ಒತ್ತಿರಿ.

ಮತ್ತೊಮ್ಮೆ ಈ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು
- ನಟರಾಜ ಉಪಾಧ್ಯ
ಪ್ರಸಂಗಪ್ರತಿ ಸಂಗ್ರಹ ಯೋಜನೆ ಹಾಗೂ ಯಕ್ಷವಾಹಿನಿ ಸಂಸ್ಥೆಯ ಪರವಾಗಿ

Share:

No comments:

Post a Comment

ಹೆಚ್ಚು ವೀಕ್ಷಣೆಯಾದವು

Powered by Blogger.

ಹೊಸತು..

ನೀವೂ ಪಾಲ್ಗೊಳ್ಳಿ

  • ನಮ್ಮ ಯೋಜನೆಗಳಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳಿ
  • ನಿಮ್ಮ ಅಮೂಲ್ಯ ಸಂಗ್ರಹಗಳನ್ನು ಡಿಜಿಟಲೀಕರಣಗೊಳಿಸುವುದಕ್ಕಾಗಿ ನಮ್ಮನ್ನು ಸಂಪರ್ಕಿಸಿ
  • ತಾಂತ್ರಿಕ ಪರಿಣತಿ, ಕಂಪ್ಯೂಟರ್ ಬೆರಳಚ್ಚು ಪರಿಣತಿ, ಪ್ರತಿ ಪರಿಶೀಲನೆ ಇತ್ಯಾದಿ ಕುಶಲತೆಯಿದ್ದ ಯಕ್ಷಗಾನಾಸಕ್ತರು ನಮ್ಮ ಯೋಜನೆಗಳಲ್ಲಿ ಕೈಜೋಡಿಸಬಹುದು
  • ಸಂಪರ್ಕ ಆಯ್ಕೆಯ ಮೂಲಕ ನಮಗೊಂದು ಸಂದೇಶ ಕಳುಹಿಸಿ