ಯಕ್ಷವಾಹಿನಿ (ರಿ)ಯ ಪ್ರಸಂಗಪ್ರತಿಸಂಗ್ರಹ ತಂತ್ರಾಂಶ (Android App) ಕ್ಕೆ ಹೊಸ ಆಯ್ಕೆಗಳನ್ನು ಸೇರಿಸಲಾಗಿದೆ.


ಯಕ್ಷಪ್ರೇಮಿಗಳೇ,

ಪ್ರಸಂಗ ಪ್ರತಿ ಸಂಗ್ರಹ ತಂತ್ರಾಂಶ (Android App) ಕ್ಕೆ ಹೊಸ ಆಯ್ಕೆಗಳನ್ನು ಸೇರಿಸಲಾಗಿದೆ. ಪರಿಷ್ಕರಿಸಿದ ತಂತ್ರಾಂಶದ ಉಪಯೋಗ ಪಡೆಯಲು ಅದನ್ನು ನಿಮ್ಮ ಚತುರಚರವಾಣಿಗೆ (ಮೊಬೈಲಿಗೆ)  ಪುನಃ ಕೆಳಗಿಸಿಕೊಳ್ಳಿರಿ.

ಪ್ರಸಂಗ ಪ್ರತಿ ಸಂಗ್ರಹ ತಂತ್ರಾಂಶದ ಕೊಂಡಿ: 
https://play.google.com/store/apps/details?id=prasanga.prati.sangraha


ಈಗ ಪ್ರಸಂಗ ಪುಸ್ತಕದ ಕೊಂಡಿಯನ್ನು ಎಲ್ಲಾ ಮಾಹಿತಿಗಳೊಡನೆ ಹಂಚಬಹುದು;
- ಪ್ರಸಂಗದ ಹೆಸರಿನ ಮೇಲೆ ಟ್ಯಾಪ್ ಮಾಡಿದಾಗ ಪ್ರಸಂಗದ ವಿವರಗಳು ಗೋಚರಿಸುತ್ತವೆ, ಅಲ್ಲಿ ಶೇರ್ ಆಯ್ಕೆಯ ಮೂಲಕ ಸಾಮಾಜಿಕ ತಾಣಗಳಲ್ಲಿ / ವಾಟ್ಸಾಪ್ / ಟೆಲಿಗ್ರಾಂ / ಇಮೇಲ್ / ಇತ್ಯಾದಿಗಳ ಮೂಲಕ ಹಂಚಬಹುದು

- ಯಕ್ಷವಾಹಿನಿಯ ಎಲ್ಲಾ ಯೋಜನೆಗಳ ಕೊಂಡಿಗಳನ್ನು ಮುಖಪುಟ(ಜೀವನದಿ) ದಲ್ಲಿ ಕೊಡಲಾಗಿದೆ- ಮುಖಪುಟಕ್ಕೆ ಯಕ್ಷವಾಹಿನಿ: ಯಕ್ಷಗಾನದ ಜೀವನದಿ ಎನ್ನುವ  ತಲೆಬರಹ ಕೊಡಲಾಗಿದೆ, ಜೀವನದಿಯ ಕವಲುಗಳ ಲಿಂಕ್ ಅಲ್ಲಿ ಲಭ್ಯವಿದೆ

- ಪ್ರಸಂಗ ಪಟ್ಟಿಯ ೨ನೇ ಆವೃತ್ತಿಯ ೨ ಕೊಂಡಿಗಳನ್ನು ಜೀವನದಿ ಪುಟದಲ್ಲಿ ಕೊಡಲಾಗಿದೆ

- ಪ್ರಸಂಗ ಪ್ರತಿ/ಪ್ರಸಂಗ ಕೋಶದ ಪುಸ್ತಕಗಳು ಒಂದೇ ಕಡೆಯಲ್ಲಿ ಸಿಗುವ ಕೊಂಡಿಯನ್ನು ಜೀವನದಿ ಪುಟಕ್ಕೆ ಸೇರಿಸಲಾಗಿದೆ- ಒಂದು ಪ್ರಸಂಗವನ್ನು ಹುಡುಕಿ ಅದರ ವಿವರ ನೋಡಿ ಹಿಂದೆ ಬಂದಾಗ, ಹುಡುಕಿದ್ದ ಮಾಹಿತಿ ಮಾಯವಾಗುತ್ತಿತ್ತು, ಈ ಸಮಸ್ಯೆಯನ್ನು ಸರಿಪಡಿಸಲಾಗಿದೆ.

ಈಗಾಗಲೇ ತಂತ್ರಾಂಶವನ್ನು ಅಳವಡಿಸಿಕೊಂಡವರು -

- 'ಪ್ರಸಂಗಪ್ರತಿಸಂಗ್ರಹದ' ಗೂಗಲ್ ಪ್ಲೇಸ್ಟೋರ್ ನ ಕೊಂಡಿಗೆ ಭೇಟಿಕೊಟ್ಟು Update ಆಯ್ಕೆಯ ಮೂಲಕ ಈ ಬದಲಾವಣೆಗಳನ್ನು ಅನುಸ್ಥಾಪಿಸಿಕೊಳ್ಳಬಹುದು.

ಅಥವಾ

ಗೂಗಲ್ ಪ್ಲೇಸ್ಟೋರ್ ಗೆ ಭೇಟಿಕೊಟ್ಟು ಅಲ್ಲಿ Update ಆಯ್ಕೆಯ ಮೂಲಕ 'ಪ್ರಸಂಗಪ್ರತಿಸಂಗ್ರಹ' ತಂತ್ರಾಂಶವನ್ನು ಅಪ್ಡೇಟ್ ಮಾಡಿಕೊಳ್ಳಬಹುದು.

ಹೊಸದಾಗಿ ತಂತ್ರಾಂಶವನ್ನು ಅಳವಡಿಸಿಕೊಂಡಲ್ಲಿ ಇವೆಲ್ಲಾ ನೇರವಾಗಿ ಲಭ್ಯವಾಗುತ್ತವೆ.

ಪ್ರಸಂಗ ಪ್ರತಿ ಸಂಗ್ರಹ ತಂತ್ರಾಂಶದ ಕೊಂಡಿ: 
https://play.google.com/store/apps/details?id=prasanga.prati.sangraha


ಈ ತಂತ್ರಾಂಶದ ಪರಿಕಲ್ಪನೆಯಿಂದ ಹಿಡಿದು ದಿನ ನಿತ್ಯದ ಉಸ್ತುವಾರಿಯವರೆಗೆ ಎಲ್ಲಾ ಭಾರಗಳನ್ನು ಹೊತ್ತಿರುವ ನಮ್ಮ ಲಕ್ಷ್ಮೀನಾರಾಯಣ ಭಟ್ಟರಿಗೆ (ಲ. ನಾ. ಭಟ್ಟ) ಅಭಿನಂದನೆಗಳು ಹಾಗೂ ಅಭಿವಂದನೆಗಳು.

- ನಟರಾಜ ಉಪಾಧ್ಯ
ಯಕ್ಷವಾಹಿನಿ ಸಮೂಹ / ಸಂಸ್ಥೆ  ಹಾಗೂ ಸಂಬಂಧಿತ ಯೋಜನೆಗಳ ಪರವಾಗಿ

(ಕೆಳಗೆ ಗಮನಿಸಿ : ತಂತ್ರಾಂಶದ ಇನ್ನೂ ಕೆಲವು ಅಂಶಗಳನ್ನು ತೋರಿಸುವ ಚಿತ್ರಗಳು)
Share:

ಹೆಚ್ಚು ವೀಕ್ಷಣೆಯಾದವು

Powered by Blogger.

ಹೊಸತು..

ನೀವೂ ಪಾಲ್ಗೊಳ್ಳಿ

  • ನಮ್ಮ ಯೋಜನೆಗಳಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳಿ
  • ನಿಮ್ಮ ಅಮೂಲ್ಯ ಸಂಗ್ರಹಗಳನ್ನು ಡಿಜಿಟಲೀಕರಣಗೊಳಿಸುವುದಕ್ಕಾಗಿ ನಮ್ಮನ್ನು ಸಂಪರ್ಕಿಸಿ
  • ತಾಂತ್ರಿಕ ಪರಿಣತಿ, ಕಂಪ್ಯೂಟರ್ ಬೆರಳಚ್ಚು ಪರಿಣತಿ, ಪ್ರತಿ ಪರಿಶೀಲನೆ ಇತ್ಯಾದಿ ಕುಶಲತೆಯಿದ್ದ ಯಕ್ಷಗಾನಾಸಕ್ತರು ನಮ್ಮ ಯೋಜನೆಗಳಲ್ಲಿ ಕೈಜೋಡಿಸಬಹುದು
  • ಸಂಪರ್ಕ ಆಯ್ಕೆಯ ಮೂಲಕ ನಮಗೊಂದು ಸಂದೇಶ ಕಳುಹಿಸಿ