ಶಾರ್ವರೀ ಸಂವತ್ಸರದ ಹೊಸ ವರುಷದ ಹರುಷವ ಹೆಚ್ಚಿಸುವತ್ತ ಪ್ರಸಂಗಪ್ರತಿಸಂಗ್ರಹವು ೧,೦೦೦ ಪ್ರತಿಗಳ ಗಡಿಯನ್ನು ದಾಟಿದೆ!


   ನಿಮ್ಮೆಲ್ಲರ ಸಹಾಯ, ಸಹಕಾರ ಹಾಗೂ ಹಾರೈಕೆಗಳಿಗೆ ಧನ್ಯವಾದಗಳು, ಪ್ರಸಂಗಪ್ರತಿಸಂಗ್ರಹವು ಶಾರ್ವರೀ ಸಂವತ್ಸರವನ್ನು ೧,೦೦೦ ಪ್ರತಿಗಳ ಗಡಿಯನ್ನು ದಾಟಿ ಹೊಸ ವರುಷಕ್ಕೆ ನವ ಸ್ಫೂರ್ತಿಯ ಲಗ್ಗೆ ಇಟ್ಟಿದೆ.

ಮೊದಲೇ ತಿಳಿಸದಂತೆ, ಸಂಚಿ ಪ್ರತಿಷ್ಟಾನದವರು archive.org ನಲ್ಲಿ ಸೇರಿಸಿದ ಪ್ರಸಂಗಗಳಿಗೆ ಕೂಡಾ ನೇರ ಕೊಂಡಿಗಳನ್ನು ಕೊಟ್ಟು, ಅವುಗಳನ್ನೂ ನಮ್ಮ ಸಂಗ್ರಹದ ಮೂಲಕ ನಿಮಗೆ ತಲುಪಿಸಲು ಸಹಕರಿಸುತ್ತಿದ್ದೇವೆ.

 ಕರೋನಾ ಕಾಟದ ಕಾರಣ, ನಮ್ಮ ಮಾರ್ಚಿಯ ಪ್ರಸಂಗ ಸ್ಕ್ಯಾನಿಂಗ್‌ ಕಮ್ಮಟ ನಡೆಯದೇ ಸಾವಿರದ ಗೆರೆಯನ್ನು ದಾಟಲು ಕೆಲವು ದಿನಗಳೇ ತಡವಾದವು. ಕರೋನಾ ಮಾರಿಯ ಮೇಲೆ ಸೇಡು ತೀರಿಸಿಕೊಳ್ಳಲು, ದಯವಿಟ್ಟು ಹೆಚ್ಚೆಚ್ಚು ಜನರು ತಮ್ಮ ಅಪೂರ್ವ ಸಂಗ್ರಹಗಳಿಂದ ಈವರೆಗೆ ಸೇರಿಸಲು ಸಾಧ್ಯವಾಗದ ಹಸ್ತಪ್ರತಿಗಳನ್ನೂ ಪ್ರಕಟಿತ ಪ್ರಸಂಗಪ್ರತಿಗಳನ್ನೂ ಸ್ಕ್ಯಾನ್‌ ಮಾಡಿ ದಯವಿಟ್ಟು ನಮಗೆ ಕಳುಹಿಸಿ. ೨,೦೦೦ದ ಗೆರೆಯನ್ನೂ ಬೇಗ ದಾಟೋಣ!




ಪ್ರಸಂಗಪ್ರತಿಸಂಗ್ರಹ  ಆಂಡ್ರೋಯ್ಡ್ ಆಪ್ ನ ಕೊಂಡಿ : 

ಹಳೆಯ ಕೃತಿಗಳ ಜೊತೆಗೆ ಸಮಕಾಲೀನ ಕೃತಿಗಳೂ ಸೇರುತ್ತಿವೆ. ಸಮಕಾಲೀನ ಕೃತಿಗಳ ಕುರಿತಾಗಿ ಅವುಗಳ ಕವಿ ಹಾಗೂ ಪ್ರಕಾಶಕರ ಒಪ್ಪಿಗೆ ನೇರವಾಗಿ ಇಲ್ಲಾ ಪರೋಕ್ಷವಾಗಿ ತೆಗೆದುಕೊಳ್ಳುತ್ತಿದ್ದೇವೆ. ಒಪ್ಪಿಗೆ ಸಿಗದಿದ್ದರೆ ಅವುಗಳನ್ನು ತಡೆ ಹಿಡಿದು, ಮುಂದೆ ಸಿಗಬಹುದೆಂಬ ಆಶಯದಲ್ಲಿ ಇದ್ದೇವೆ. ಇಲ್ಲಿ ಒಂದು ಸೂಕ್ಷ್ಮ ವಿಚಾರವಿದೆ. ಅಂತರಜಾಲದಲ್ಲಿ ಸ್ಕ್ಯಾನ್‌ ಆದ ಪ್ರತಿ ಸೇರಿದರೆ ಅವುಗಳ ಮುದ್ರಿತ ಪ್ರತಿಗಳ ಮಾರಾಟಕ್ಕೆ ಪೆಟ್ಟು ಬೀಳಬಹುದು. ಆದರೆ ಪ್ರಚಾರ ಮತ್ತು ಜನಪ್ರಿಯತೆ ವಿಚಾರದಲ್ಲಿ ಅಂತರಜಾಲ ಸ್ಕ್ಯಾನ್ ಪ್ರತಿಗಳು ಕವಿ ಮತ್ತು ಪ್ರಕಾಶಕರಿಗೆ ಹೆಚ್ಚಿನ ಖ್ಯಾತಿ, ಗೌರವ ಸಂದಾಯವನ್ನು ತರಬಹುದು. ಒಟ್ಟಿನಲ್ಲಿ, ಮುದ್ರಿತ ಪ್ರಸಂಗಪುಸ್ತಕಗಳ ಮಾರಾಟದಿಂದ ಹಣ ಮಾಡುವ ನಿರೀಕ್ಷೆ ಇಲ್ಲದವರು ನಮ್ಮೊಂದಿಗೆ ಕೂಡಲೇ ಸಹಕರಿಸುವುದು ಎಲ್ಲರೂ ಗೆಲ್ಲುವ ತಂತ್ರವೇ ಆಗಿದೆ. ಯಕ್ಷಗಾನದಿಂದ ಬದುಕು ಆಗುವವರ ಹೊಟ್ಟೆಯ ಮೇಲೆ ಪೆಟ್ಟು ನಮ್ಮಿಂದ ಆಗಬಾರದು ಎಂಬ ಕಳಕಳಿ ನಮ್ಮದು. ಅದರಲ್ಲೂ ಮುಖ್ಯವಾಗಿ ಹೆಚ್ಚಿನ ಮನ್ನಣೆಗೆ ಅರ್ಹರಾಗಿರುವ ಅದರಲ್ಲೂ ಸಮಕಾಲೀನರಾಗಿರುವ ಪ್ರಸಂಗಕವಿಗಳಿಗೆ ನಮ್ಮ ಯೋಜನೆಯಿಂದ ತೊಂದರೆ ಆಗಬಾರದು. ಆದುದರಿಂದ ಕವಿಗಳ ಮತ್ತು ಪ್ರಕಾಶಕರ ಪೂರ್ವ ಅನುಮತಿ ಅತೀ ಅವಶ್ಯ. ಈ ನಿಟ್ಟಿನಲ್ಲಿ   ಕವಿಗಳ ಮತ್ತು ಪ್ರಕಾಶಕರ ಖಚಿತವಾದ ಅನುಮತಿಗಳನ್ನು ಕೊಡಿಸುವಲ್ಲಿ ಅನೇಕ ಸ್ವಯಂಸೇವಕರ ಸಹಾಯ ನಮಗೆ ಬೇಕೇ ಬೇಕು. ಅಂತಹವರಲ್ಲಿ ನೀವೂ ಒಬ್ಬರಿರಬಹುದು, ದಯವಿಟ್ಟು ಯೋಚಿಸಿ.

ನಮಗೆ ಸಹಕರಿಸಲು ಹೊರಟಿರುವ ನಿಮ್ಮ ಸಮಯ ಮತ್ತು ಶಕ್ತಿಯು ಅಮೂಲ್ಯವಾದುದುಆ ನಿಟ್ಟಿನಲ್ಲಿ ಈ ಕೆಳಗಿನ ಅಂಶಗಳನ್ನು ಹಂಚಿಕೊಳ್ಳುತ್ತಿದ್ದೇವೆ.

1.   ತಮ್ಮಲ್ಲಿರುವ ಯಾ ತಮ್ಮ ವಲಯದಲ್ಲಿರುವವರ ಪ್ರಸಂಗಗಳ ಹೆಸರುಕವಿಪ್ರಕಾಶನ (ಹಸ್ತಪ್ರತಿಯೂ ನಮಗೆ ಪ್ರಕಾಶನದ ಲೆಕ್ಕವೇ) ಗಳ ವಿವರವನ್ನು ಪಟ್ಟಿಯಾಗಿ ನಮಗೆ ಕಳಿಸಿದಲ್ಲಿಈಗಾಗಲೇ ಸಂಗ್ರಹದಲ್ಲಿ ಇರುವ ಪ್ರತಿಗಳನ್ನು ಹೊರತುಪಡಿಸಿ ಬೇಕಾದ ಉಳಿದದ್ದನ್ನುಮಾತ್ರ ಸಂಗ್ರಹಕ್ಕೆ ಸೇರಿಸುವ ಭಾರ ಉಳಿಯುತ್ತದೆ. ಇಲ್ಲಿಯೂ ಕೂಡಾ ನಿಮ್ಮಲ್ಲಿರುವ ನಮಗೆ ಬೇಕಾದ ಪ್ರಸಂಗಗಳ ಪಟ್ಟಿ ಉದ್ದವಿದ್ದಾಗನೀವು ಕೊಡುವ ಮೊದಲೇ ನಮಗೆ ಸಿಕ್ಕರೆ ನಿಮ್ಮ ಕೆಲಸವನ್ನು ಉಳಿಸಬಹುದುಹಾಗಾಗಿಯೇ ಉದ್ದ ಪಟ್ಟಿಯಲ್ಲಿ ನೀವು ಈಗಲೇ ಸ್ಕ್ಯಾನ್‌ ಮಾಡಲು ಹೊರಟ ಪ್ರತಿಗಳ ಬಗ್ಗೆ ತಿಳಿಸಿಯೇ ಪ್ರಾರಂಭಿಸಿಕೊನೆಯ ನಿಮಿಷದ ಸೇರ್ಪಡೆ ಇದ್ದಾಗ ನಿಮ್ಮ ಕೆಲಸವನ್ನು ಅಲ್ಲಿ ಉಳಿಸುವುದು ನಮ್ಮ ಧರ್ಮ.

2.   ಸಮಕಾಲೀನ ಕವಿಗಳ ಪ್ರತಿಗಳಿದ್ದರೆನಮ್ಮ ಪರವಾಗಿ ನೀವೇ ಅವರ ಅನುಮತಿ ಕೊಡಿಸಿದರೆ ನಮಗೆ ಸುಲಭಇಲ್ಲದಿರೆ ಅವರ ಸಂಪರ್ಕ ವಿವರವಿದ್ದರೆ ಕೊಡಿಇಲ್ಲದಿರೆ ಸ್ಕ್ಯಾನ್‌ ಮಾಡಿ ಕಳುಹಿಸುವುದನ್ನು ನಿಲ್ಲಿಸಬೇಡಿ. ನಾವೇ ಕವಿಯ ಅನುಮತಿ ಪಡೆಯಲು ಪ್ರಯತ್ನಿಸುತ್ತೇವೆ. ಅನುಮತಿ ಸಿಗುವ ತನಕ ತಾವು ಕಳುಹಿಸಿದ ಸ್ಕ್ಯಾನ್‌ ಪ್ರತಿಗಳನ್ನುತಡೆಹಿಡಿದರೂ ಕ್ರಮೇಣ ಅವು ನಮ್ಮ ಸಂಗ್ರಹದಲ್ಲಿ ಸೇರಿ ನಿಮ್ಮ ಪ್ರಯತ್ನ ಸಾರ್ಥಕವಾಗುತ್ತದೆ.  


3.   ಸ್ಕ್ಯಾನ್‌ ಮಾಡುವ ಮೊದಲು ಆ ಪ್ರಸಂಗವು ಈಗಾಗಲೇ ಪ್ರಸಂಗಪ್ರತಿ ಸಂಗ್ರಹದಲ್ಲಿ ಲಭ್ಯವಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ನಂತರ ಮುಂದುವರೆಯಿರಿಆ ಕುರಿತು ನಿಮಗೆ ಕೋಷ್ಟಕದಲ್ಲಿ ಹುಡುಕುವುದು ಕಷ್ಟವೆನಿಸಿದರೆ ನಮ್ಮನ್ನುಕೇಳಿಖಚಿತಪಡಿಸುತ್ತೇವೆ.


4.   ಪ್ರತಿಗಳನ್ನು ಸ್ಕ್ಯಾನ್‌ ಮಾಡಲು ಕ್ಯಾಮ್‌ ಸ್ಕ್ಯಾನ್‌ (CamScan) ಎಂಬ ತಂತ್ರಾಂಶವನ್ನು ಪ್ಲೇಸ್ಟೋರ್‌ ನ ಮೂಲಕ ಮೊಬೈಲ್ಗೆ ಇಳಿಸಿಕೊಂಡು ಉಪಯೋಗಿಸಬಹುದು.


5.   ಪ್ರತಿಯ ಮುಖಪುಟದಿಂದ ಪ್ರಾರಂಭಿಸಿ ಕೊನೆಯ ರಕ್ಷಾಪುಟದವರೆಗೆ ಸ್ಕ್ಯಾನ್‌ ಇರಲಿಹಿಂದೆ ಆಗಿ ಹೋದ ಪ್ರಕಾಶನಕ್ಕೆ ಪೂರ್ಣ ನ್ಯಾಯಕೊಡುವುದು ನಮ್ಮ ಧರ್ಮ.


6.   ಸ್ಕ್ಯಾನ್‌ ಮಾಡುವಾಗ ಪುಟದ ಅಂಚುಗಳು ಕತ್ತರಿಸಿಹೋಗಿಲ್ಲ ಎಂಬುದನ್ನು ಗಮನಿಸಿಎರಡು ಎದುರು ಪುಟಗಳ ನಡುವಿನ ಅಕ್ಷರಗಳು ನುಂಗಿ ಹೋಗಿಲ್ಲ ಎಂಬುದನ್ನೂ ಖಾತ್ರಿ ಮಾಡಿಕೊಳ್ಳಿರಿ.

7.   ಪುಟಗಳು ಮತ್ತು ಅಕ್ಷರಗಳು ಸ್ಪಷ್ಟವಾಗಿ ಕಾಣುವಂತೆ ಸ್ಕ್ಯಾನ್‌ ಇರಲಿಇದಕ್ಕಾಗಿ ಕ್ಯಾಮೆರಾದ ಸ್ಕ್ರೀನನ್ನು ಒಮ್ಮೆ ಒತ್ತಿ ಫೋಕಸ್‌ ಮಾಡಿಕೊಳ್ಳಬೇಕಾಗಬಹುದು.  ಒಳ್ಳೇ ನೈಸರ್ಗಿಕ ಬೆಳಕಿನಲ್ಲಿ ಫ್ಲಾಷ್‌ ಇಲ್ಲದೇ ತೆಗೆದ ಸ್ಕ್ಯಾನ್‌ ಪ್ರತಿ ಓದಲು ಸ್ಪಷ್ಟವಿರುತ್ತದೆ.


8.   ಪುಟಗಳು ಓರೆಕೋರೆಯಾಗಿರದೆ ನೇರವಾಗಿರಲಿಸಣ್ಣ ಮಟ್ಟದ ಓರೆಕೋರೆಗಳನ್ನು ಕ್ಯಾಮ್‌ ಸ್ಕ್ಯಾನ್‌ ತಾನೇ ಸರಿಪಡಿಸುತ್ತದೆ. ಕೆಲವೊಮ್ಮೆ ಸ್ಕ್ಯಾನ್‌ ಆದ ನಂತರ ಕ್ಯಾಮ್ಸ್ಕ್ಯಾನ್‌ ಪೂರ್ಣ ಪುಟವನ್ನು ಆರಿಸಿಕೊಂಡಂತೆ ತೋರಿಸದೇ ಇದ್ದಾಗನೀವು ಅದು ಹಾಕಿದ ಗೆರೆಗಳನ್ನು ತಿದ್ದಿ ಪೂರ್ಣ ಪುಟಕ್ಕೆ ವಿಸ್ತರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅದು ಹಾಕಿಕೊಟ್ಟ ಗೆರೆಯನ್ನು ಮಧ್ಯದಲ್ಲಿ ದೂಕಿದರೆ ಇಡೀ ಗೆರೆಯೇ ನಿಮಗೆ ಬೇಕಾದಂತೆ ಚಲಿಸುತ್ತದೆಮೂಲೆಯಿಂದ ತಳ್ಳಿದರೆ ಮೂಲೆ ಮಾತ್ರ ಚಲಿಸುತ್ತದೆ. ನಿಮಗೆ ಬೇಕಾದಂತೆ ಚಲನೆಯ ಕ್ರಮವನ್ನು ಆಯ್ದುಕೊಳ್ಳಿ.

9.   ಅಕ್ಕಪಕ್ಕದ ಪುಟಗಳನ್ನು ಒಂದೊಂದಾಗಿ ಸ್ಕ್ಯಾನ್‌ ಮಾಡುವುದರ ಬದಲಾಗಿ ಎರಡೂ ಒಂದೇ ಪುಟದಲ್ಲಿ ಬರುವಂತೆ ಮಾಡಿದರೆ ಸಮಯ ಮತ್ತು ಫೈಲ್ನ ಗಾತ್ರ ಎರಡನ್ನೂ ಕಡಿಮೆ ಮಾಡಬಹುದುಮುಖ್ಯವಾಗಿ ಎಲ್ಲಾ ಅಕ್ಷರಗಳು ಓದುವಂತಿರಬೇಕು.

10.    ಸ್ಕ್ಯಾನ್‌ ಕಾರ್ಯ ಮುಗಿದ ನಂತರ ಯಾವುದೇ ಪುಟ ಬಿಟ್ಟುಹೋಗಿಲ್ಲ ಎಂಬುದನ್ನು ಮತ್ತೊಮ್ಮೆ ಗಮನಿಸಿ.


11.    ಸ್ಕ್ಯಾನ್‌ ಮಾಡಿದ ಪ್ರತಿಗಳನ್ನು ಮೈಲ್‌ ಅಥವಾ ವಾಟ್ಸ್ಯಾಪ್‌ ಮೂಲಕ ನಮಗೆ ಕಳಿಸಿ ಕೊಡಿಒಂದು ಪುಸ್ತಕದ ಎಲ್ಲಾ ಪುಟಗಳನ್ನು ಸ್ಕ್ಯಾನ್‌ ಮಾಡಿದ ನಂತರ “Share” ಮಾಡ ಹೊರಟಾಗ ಪಿಡಿಎಫ್ ಸ್ವರೂಪವನ್ನು ಆಯ್ದುಕೊಂಡು ನಮ್ಮ ಈಮೈಲಿಗೆ ಇಲ್ಲಾ ವಾಟ್ಸ್ಯಾಪ್‌ ಸಂಖ್ಯೆಗೆ ಕಳುಹಿಸಿ.

12.    ನೀವು ಮಾಡಿದ ಸ್ಕ್ಯಾನ್‌ ನಲ್ಲಿ ತಪ್ಪುಗಳಿದ್ದರೆ ನಾವು ನಿಮ್ಮ ಗಮನಕ್ಕೆ ತರುತ್ತೇವೆಆಗ ನೀವು ಸರಿಯಿಲ್ಲದ ಪೇಜುಗಳನ್ನು ಮತ್ತೆ ಸ್ಕ್ಯಾನ್‌ ಮಾಡಿಕೊಡಬೇಕಾಗಿ ಕೇಳುತ್ತೇವೆ. ಪುಸ್ತಕ ದಪ್ಪವಿದ್ದರೆ ಪುಸ್ತಕದ ಮಧ್ಯದ ಅಕ್ಷರಗಳು ಮಡಿಕೆಯಲ್ಲಿ ಮುಚ್ಚಿ ಹೋಗುವ ಅಪಾಯ ಇರುವುದರಿಂದ ಪುಸ್ತಕವನ್ನು ಬೇಕಾದ ಹಾಗೆ ಒತ್ತಿ ಒಂದು ಕೋನದಲ್ಲಿ ಹಿಡಿದುಕೊಳ್ಳಲು ಇನ್ನೊಬ್ಬರ ಸಹಾಯ ಬೇಕಾಗುತ್ತದೆ.

13. ನಿಮ್ಮ ಆಪ್ತರಲ್ಲಿ / ಸ್ನೇಹಿತರಲ್ಲಿ ಹಳೆಯ ಪ್ರತಿಗಳು ಇದ್ದು ಅದನ್ನು ನಮಗೆ ತಲುಪಿಸುವಲ್ಲಿ ನಿಮಗೆ ಸಹಾಯ ಮಾಡಲು ಸಾಧ್ಯವಾಗದಿರೆಅವರ ಅನುಮತಿಯಂತೆ ಅವರ ಸಂಪರ್ಕವನ್ನು ನಮಗೆ ದಯವಿಟ್ಟು ಕೊಡಿ.

14.    ನಿಮಗೆ ಕ್ಯಾಮ್ಸ್ಕ್ಯಾನ್‌ ಉಪಯೋಗಿಸಿದ ಅನುಭವ ಇಲ್ಲದಿರೆ ಅದನ್ನು ಕಲಿಯುವುದು ಸುಲಭವಿದೆ. ತಿಳಿದಿವರ ಹತ್ತಿರ ೫ ನಿಮಿಷಗಳಲ್ಲಿ ತೋರಿಸಿಕೊಂಡು ಕಲಿಯಿರಿ ಇಲ್ಲವೇ ಯೂಟ್ಯೂಬಿನಲ್ಲಿ ಈ ಸಂಬಂಧಿ ವಿಡಿಯೋಗಳನ್ನು ನೋಡಿ ಕಲಿಯಿರಿ. ಉದಾ: https://www.youtube.com/watch?v=LUQDCUl1L4g

ನಿಮ್ಮ ಸ್ವಯಂಸೇವೆಯ ಸಹಾಯವನ್ನೇ ನಂಬಿಕೊಂಡಿದ್ದೇವೆ.

ಸಂಪಾದಕ ಮಂಡಳಿ ಪ್ರಸಂಗಪ್ರತಿಸಂಗ್ರಹ ಯೋಜನೆ

ವಿಶ್ವಸ್ಥರುಯಕ್ಷವಾಹಿನಿ ಪ್ರತಿಷ್ಠಾನ


ಸಂಪರ್ಕ ವಿವರ:

ಈಮೈಲ್‌ : prasangaprathisangraha@gmail.com

ಮೊಬೈಲ್:‌ ನಟರಾಜ ಉಪಾಧ್ಯ – 9632824391 ಅಶ್ವಿನಿ ಹೊದಲ - 9686112237
Share:

ಹೆಚ್ಚು ವೀಕ್ಷಣೆಯಾದವು

Powered by Blogger.

ಹೊಸತು..

ನೀವೂ ಪಾಲ್ಗೊಳ್ಳಿ

  • ನಮ್ಮ ಯೋಜನೆಗಳಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳಿ
  • ನಿಮ್ಮ ಅಮೂಲ್ಯ ಸಂಗ್ರಹಗಳನ್ನು ಡಿಜಿಟಲೀಕರಣಗೊಳಿಸುವುದಕ್ಕಾಗಿ ನಮ್ಮನ್ನು ಸಂಪರ್ಕಿಸಿ
  • ತಾಂತ್ರಿಕ ಪರಿಣತಿ, ಕಂಪ್ಯೂಟರ್ ಬೆರಳಚ್ಚು ಪರಿಣತಿ, ಪ್ರತಿ ಪರಿಶೀಲನೆ ಇತ್ಯಾದಿ ಕುಶಲತೆಯಿದ್ದ ಯಕ್ಷಗಾನಾಸಕ್ತರು ನಮ್ಮ ಯೋಜನೆಗಳಲ್ಲಿ ಕೈಜೋಡಿಸಬಹುದು
  • ಸಂಪರ್ಕ ಆಯ್ಕೆಯ ಮೂಲಕ ನಮಗೊಂದು ಸಂದೇಶ ಕಳುಹಿಸಿ