2020 - 700 ಪ್ರಸಂಗ ಪ್ರತಿಗಳ ಗಡಿ ದಾಟಿ ಹೊಸ ವರುಷದ ಹರುಷದ ಶುಭಾಶಯ ಕೋರುವ ಪ್ರಸಂಗಪ್ರತಿಸಂಗ್ರಹ ತಂಡ ಹಾಗೂ ಯಕ್ಷವಾಹಿನಿ ಸಮೂಹ!

ಪ್ರಸಂಗಪ್ರತಿಸಂಗ್ರಹವು ೭೦೦ರ ಗಡಿ ದಾಟಿದೆ ಎನ್ನಲು ಸಂತಸವಾಗುತ್ತಿದೆ. ಇತ್ತೀಚಿನ ಡಿಸೆಂಬರ್‌ ೨೯ರ  ಪ್ರಸಂಗಪ್ರತಿ ಸ್ಕ್ಯಾನಿಂಗ್‌ ಕಮ್ಮಟದಲ್ಲಿ ಸ್ಕ್ಯಾನ್‌ ಆದ ಪ್ರಸಂಗಗಳು ಸೇರಿದ್ದು ೭೦೦ರ ಗಡಿ ದಾಟಲು ಸಾಧ್ಯವಾಗಿದೆ. ಮುಂದೆ ಎಲ್ಲೆಲ್ಲಿ ನೂರಾರು ನಮ್ಮ ಸಂಗ್ರಹದಲ್ಲಿ ಇರದ ಪ್ರಸಂಗ ಪುಸ್ತಕಗಳು ಲಭ್ಯವೋ ಅಲ್ಲಲ್ಲಿ ಸ್ಕ್ಯಾನಿಂಗ್‌ ಕಮ್ಮಟಗಳನ್ನು ನಡೆಸುವ ಸ್ವಯಂಸೇವಕರು ಒಟ್ಟಾದರೆ, ತಿಂಗಳಿಗೆ ಒಂದು ಕಮ್ಮಟವಾದರೂ ನಡೆದು ನಾವು ೪,೦೦೦ ಪ್ರಸಂಗಪ್ರತಿಗಳ ಗುರಿಯತ್ತ ಬೇಗ ಸಾಗುವುದು ಸಾಧ್ಯ ಎನ್ನಿಸುತ್ತಿದೆ. ಮುಂದಿನ ಬೆಂಗಳೂರಿನ ಸ್ಕ್ಯಾನಿಂಗ್‌ ಕಮ್ಮಟವು ಪಟ್ಟಾಜೆ ವಸಂತಕೃಷ್ಣ ಭಟ್ಟರ ಮನೆಯಲ್ಲಿ ನಡೆಯಲಿದ್ದು ೮೦೦ರ ಗಡಿ ದಾಟುವ ಕನಸು ಗರಿಗೆದರಸುತ್ತಿದೆ.

ಪ್ರಸಂಗಪ್ರತಿಸಂಗ್ರಹ  ಆಂಡ್ರೋಯ್ಡ್ ಆಪ್ ನ ಕೊಂಡಿ : 

ಹಳೆಯ ಕೃತಿಗಳ ಜೊತೆಗೆ ಸಮಕಾಲೀನ ಕೃತಿಗಳೂ ಸೇರುತ್ತಿವೆ. ಸಮಕಾಲೀನ ಕೃತಿಗಳ ಕುರಿತಾಗಿ ಅವುಗಳ ಕವಿ ಹಾಗೂ ಪ್ರಕಾಶಕರ ಒಪ್ಪಿಗೆ ನೇರವಾಗಿ ಇಲ್ಲಾ ಪರೋಕ್ಷವಾಗಿ ತೆಗೆದುಕೊಳ್ಳುತ್ತಿದ್ದೇವೆ. ಒಪ್ಪಿಗೆ ಸಿಗದಿದ್ದರೆ ಅವುಗಳನ್ನು ತಡೆ ಹಿಡಿದು, ಮುಂದೆ ಸಿಗಬಹುದೆಂಬ ಆಶಯದಲ್ಲಿ ಇದ್ದೇವೆ. ಇಲ್ಲಿ ಒಂದು ಸೂಕ್ಷ್ಮ ವಿಚಾರವಿದೆ. ಅಂತರಜಾಲದಲ್ಲಿ ಸ್ಕ್ಯಾನ್‌ ಆದ ಪ್ರತಿ ಸೇರಿದರೆ ಅವುಗಳ ಮುದ್ರಿತ ಪ್ರತಿಗಳ ಮಾರಾಟಕ್ಕೆ ಪೆಟ್ಟು ಬೀಳಬಹುದು. ಆದರೆ ಪ್ರಚಾರ ಮತ್ತು ಜನಪ್ರಿಯತೆ ವಿಚಾರದಲ್ಲಿ ಅಂತರಜಾಲ ಸ್ಕ್ಯಾನ್ ಪ್ರತಿಗಳು ಕವಿ ಮತ್ತು ಪ್ರಕಾಶಕರಿಗೆ ಹೆಚ್ಚಿನ ಖ್ಯಾತಿ, ಗೌರವ ಸಂದಾಯವನ್ನು ತರಬಹುದು. ಒಟ್ಟಿನಲ್ಲಿ, ಮುದ್ರಿತ ಪ್ರಸಂಗಪುಸ್ತಕಗಳ ಮಾರಾಟದಿಂದ ಹಣ ಮಾಡುವ ನಿರೀಕ್ಷೆ ಇಲ್ಲದವರು ನಮ್ಮೊಂದಿಗೆ ಕೂಡಲೇ ಸಹಕರಿಸುವುದು ಎಲ್ಲರೂ ಗೆಲ್ಲುವ ತಂತ್ರವೇ ಆಗಿದೆ. ಯಕ್ಷಗಾನದಿಂದ ಬದುಕು ಆಗುವವರ ಹೊಟ್ಟೆಯ ಮೇಲೆ ಪೆಟ್ಟು ನಮ್ಮಿಂದ ಆಗಬಾರದು ಎಂಬ ಕಳಕಳಿ ನಮ್ಮದು. ಅದರಲ್ಲೂ ಮುಖ್ಯವಾಗಿ ಹೆಚ್ಚಿನ ಮನ್ನಣೆಗೆ ಅರ್ಹರಾಗಿರುವ ಅದರಲ್ಲೂ ಸಮಕಾಲೀನರಾಗಿರುವ ಪ್ರಸಂಗಕವಿಗಳಿಗೆ ನಮ್ಮ ಯೋಜನೆಯಿಂದ ತೊಂದರೆ ಆಗಬಾರದು. ಆದುದರಿಂದ ಕವಿಗಳ ಮತ್ತು ಪ್ರಕಾಶಕರ ಪೂರ್ವ ಅನುಮತಿ ಅತೀ ಅವಶ್ಯ. ಈ ನಿಟ್ಟಿನಲ್ಲಿ   ಕವಿಗಳ ಮತ್ತು ಪ್ರಕಾಶಕರ ಖಚಿತವಾದ ಅನುಮತಿಗಳನ್ನು ಕೊಡಿಸುವಲ್ಲಿ ಅನೇಕ ಸ್ವಯಂಸೇವಕರ ಸಹಾಯ ನಮಗೆ ಬೇಕೇ ಬೇಕು. ಅಂತಹವರಲ್ಲಿ ನೀವೂ ಒಬ್ಬರಿರಬಹುದು, ದಯವಿಟ್ಟು ಯೋಚಿಸಿ.

ನಮಗೆ ಸಹಕರಿಸಲು ಹೊರಟಿರುವ ನಿಮ್ಮ ಸಮಯ ಮತ್ತು ಶಕ್ತಿಯು ಅಮೂಲ್ಯವಾದುದುಆ ನಿಟ್ಟಿನಲ್ಲಿ ಈ ಕೆಳಗಿನ ಅಂಶಗಳನ್ನು ಹಂಚಿಕೊಳ್ಳುತ್ತಿದ್ದೇವೆ.

1.   ತಮ್ಮಲ್ಲಿರುವ ಯಾ ತಮ್ಮ ವಲಯದಲ್ಲಿರುವವರ ಪ್ರಸಂಗಗಳ ಹೆಸರುಕವಿಪ್ರಕಾಶನ (ಹಸ್ತಪ್ರತಿಯೂ ನಮಗೆ ಪ್ರಕಾಶನದ ಲೆಕ್ಕವೇ) ಗಳ ವಿವರವನ್ನು ಪಟ್ಟಿಯಾಗಿ ನಮಗೆ ಕಳಿಸಿದಲ್ಲಿಈಗಾಗಲೇ ಸಂಗ್ರಹದಲ್ಲಿ ಇರುವ ಪ್ರತಿಗಳನ್ನು ಹೊರತುಪಡಿಸಿ ಬೇಕಾದ ಉಳಿದದ್ದನ್ನುಮಾತ್ರ ಸಂಗ್ರಹಕ್ಕೆ ಸೇರಿಸುವ ಭಾರ ಉಳಿಯುತ್ತದೆ. ಇಲ್ಲಿಯೂ ಕೂಡಾ ನಿಮ್ಮಲ್ಲಿರುವ ನಮಗೆ ಬೇಕಾದ ಪ್ರಸಂಗಗಳ ಪಟ್ಟಿ ಉದ್ದವಿದ್ದಾಗನೀವು ಕೊಡುವ ಮೊದಲೇ ನಮಗೆ ಸಿಕ್ಕರೆ ನಿಮ್ಮ ಕೆಲಸವನ್ನು ಉಳಿಸಬಹುದುಹಾಗಾಗಿಯೇ ಉದ್ದ ಪಟ್ಟಿಯಲ್ಲಿ ನೀವು ಈಗಲೇ ಸ್ಕ್ಯಾನ್‌ ಮಾಡಲು ಹೊರಟ ಪ್ರತಿಗಳ ಬಗ್ಗೆ ತಿಳಿಸಿಯೇ ಪ್ರಾರಂಭಿಸಿಕೊನೆಯ ನಿಮಿಷದ ಸೇರ್ಪಡೆ ಇದ್ದಾಗ ನಿಮ್ಮ ಕೆಲಸವನ್ನು ಅಲ್ಲಿ ಉಳಿಸುವುದು ನಮ್ಮ ಧರ್ಮ.

2.   ಸಮಕಾಲೀನ ಕವಿಗಳ ಪ್ರತಿಗಳಿದ್ದರೆನಮ್ಮ ಪರವಾಗಿ ನೀವೇ ಅವರ ಅನುಮತಿ ಕೊಡಿಸಿದರೆ ನಮಗೆ ಸುಲಭಇಲ್ಲದಿರೆ ಅವರ ಸಂಪರ್ಕ ವಿವರವಿದ್ದರೆ ಕೊಡಿಇಲ್ಲದಿರೆ ಸ್ಕ್ಯಾನ್‌ ಮಾಡಿ ಕಳುಹಿಸುವುದನ್ನು ನಿಲ್ಲಿಸಬೇಡಿ. ನಾವೇ ಕವಿಯ ಅನುಮತಿ ಪಡೆಯಲು ಪ್ರಯತ್ನಿಸುತ್ತೇವೆ. ಅನುಮತಿ ಸಿಗುವ ತನಕ ತಾವು ಕಳುಹಿಸಿದ ಸ್ಕ್ಯಾನ್‌ ಪ್ರತಿಗಳನ್ನುತಡೆಹಿಡಿದರೂ ಕ್ರಮೇಣ ಅವು ನಮ್ಮ ಸಂಗ್ರಹದಲ್ಲಿ ಸೇರಿ ನಿಮ್ಮ ಪ್ರಯತ್ನ ಸಾರ್ಥಕವಾಗುತ್ತದೆ.  

3.   ಸ್ಕ್ಯಾನ್‌ ಮಾಡುವ ಮೊದಲು ಆ ಪ್ರಸಂಗವು ಈಗಾಗಲೇ ಪ್ರಸಂಗಪ್ರತಿ ಸಂಗ್ರಹದಲ್ಲಿ ಲಭ್ಯವಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ನಂತರ ಮುಂದುವರೆಯಿರಿಆ ಕುರಿತು ನಿಮಗೆ ಕೋಷ್ಟಕದಲ್ಲಿ ಹುಡುಕುವುದು ಕಷ್ಟವೆನಿಸಿದರೆ ನಮ್ಮನ್ನುಕೇಳಿಖಚಿತಪಡಿಸುತ್ತೇವೆ.

4.   ಪ್ರತಿಗಳನ್ನು ಸ್ಕ್ಯಾನ್‌ ಮಾಡಲು ಕ್ಯಾಮ್‌ ಸ್ಕ್ಯಾನ್‌ (CamScan) ಎಂಬ ತಂತ್ರಾಂಶವನ್ನು ಪ್ಲೇಸ್ಟೋರ್‌ ನ ಮೂಲಕ ಮೊಬೈಲ್ಗೆ ಇಳಿಸಿಕೊಂಡು ಉಪಯೋಗಿಸಬಹುದು.

5.   ಪ್ರತಿಯ ಮುಖಪುಟದಿಂದ ಪ್ರಾರಂಭಿಸಿ ಕೊನೆಯ ರಕ್ಷಾಪುಟದವರೆಗೆ ಸ್ಕ್ಯಾನ್‌ ಇರಲಿಹಿಂದೆ ಆಗಿ ಹೋದ ಪ್ರಕಾಶನಕ್ಕೆ ಪೂರ್ಣ ನ್ಯಾಯಕೊಡುವುದು ನಮ್ಮ ಧರ್ಮ.

6.   ಸ್ಕ್ಯಾನ್‌ ಮಾಡುವಾಗ ಪುಟದ ಅಂಚುಗಳು ಕತ್ತರಿಸಿಹೋಗಿಲ್ಲ ಎಂಬುದನ್ನು ಗಮನಿಸಿಎರಡು ಎದುರು ಪುಟಗಳ ನಡುವಿನ ಅಕ್ಷರಗಳು ನುಂಗಿ ಹೋಗಿಲ್ಲ ಎಂಬುದನ್ನೂ ಖಾತ್ರಿ ಮಾಡಿಕೊಳ್ಳಿರಿ.

7.   ಪುಟಗಳು ಮತ್ತು ಅಕ್ಷರಗಳು ಸ್ಪಷ್ಟವಾಗಿ ಕಾಣುವಂತೆ ಸ್ಕ್ಯಾನ್‌ ಇರಲಿಇದಕ್ಕಾಗಿ ಕ್ಯಾಮೆರಾದ ಸ್ಕ್ರೀನನ್ನು ಒಮ್ಮೆ ಒತ್ತಿ ಫೋಕಸ್‌ ಮಾಡಿಕೊಳ್ಳಬೇಕಾಗಬಹುದು.  ಒಳ್ಳೇ ನೈಸರ್ಗಿಕ ಬೆಳಕಿನಲ್ಲಿ ಫ್ಲಾಷ್‌ ಇಲ್ಲದೇ ತೆಗೆದ ಸ್ಕ್ಯಾನ್‌ ಪ್ರತಿ ಓದಲು ಸ್ಪಷ್ಟವಿರುತ್ತದೆ.

8.   ಪುಟಗಳು ಓರೆಕೋರೆಯಾಗಿರದೆ ನೇರವಾಗಿರಲಿಸಣ್ಣ ಮಟ್ಟದ ಓರೆಕೋರೆಗಳನ್ನು ಕ್ಯಾಮ್‌ ಸ್ಕ್ಯಾನ್‌ ತಾನೇ ಸರಿಪಡಿಸುತ್ತದೆ. ಕೆಲವೊಮ್ಮೆ ಸ್ಕ್ಯಾನ್‌ ಆದ ನಂತರ ಕ್ಯಾಮ್ಸ್ಕ್ಯಾನ್‌ ಪೂರ್ಣ ಪುಟವನ್ನು ಆರಿಸಿಕೊಂಡಂತೆ ತೋರಿಸದೇ ಇದ್ದಾಗನೀವು ಅದು ಹಾಕಿದ ಗೆರೆಗಳನ್ನು ತಿದ್ದಿ ಪೂರ್ಣ ಪುಟಕ್ಕೆ ವಿಸ್ತರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅದು ಹಾಕಿಕೊಟ್ಟ ಗೆರೆಯನ್ನು ಮಧ್ಯದಲ್ಲಿ ದೂಕಿದರೆ ಇಡೀ ಗೆರೆಯೇ ನಿಮಗೆ ಬೇಕಾದಂತೆ ಚಲಿಸುತ್ತದೆಮೂಲೆಯಿಂದ ತಳ್ಳಿದರೆ ಮೂಲೆ ಮಾತ್ರ ಚಲಿಸುತ್ತದೆ. ನಿಮಗೆ ಬೇಕಾದಂತೆ ಚಲನೆಯ ಕ್ರಮವನ್ನು ಆಯ್ದುಕೊಳ್ಳಿ.

9.   ಅಕ್ಕಪಕ್ಕದ ಪುಟಗಳನ್ನು ಒಂದೊಂದಾಗಿ ಸ್ಕ್ಯಾನ್‌ ಮಾಡುವುದರ ಬದಲಾಗಿ ಎರಡೂ ಒಂದೇ ಪುಟದಲ್ಲಿ ಬರುವಂತೆ ಮಾಡಿದರೆ ಸಮಯ ಮತ್ತು ಫೈಲ್ನ ಗಾತ್ರ ಎರಡನ್ನೂ ಕಡಿಮೆ ಮಾಡಬಹುದುಮುಖ್ಯವಾಗಿ ಎಲ್ಲಾ ಅಕ್ಷರಗಳು ಓದುವಂತಿರಬೇಕು.

10.    ಸ್ಕ್ಯಾನ್‌ ಕಾರ್ಯ ಮುಗಿದ ನಂತರ ಯಾವುದೇ ಪುಟ ಬಿಟ್ಟುಹೋಗಿಲ್ಲ ಎಂಬುದನ್ನು ಮತ್ತೊಮ್ಮೆ ಗಮನಿಸಿ.

11.    ಸ್ಕ್ಯಾನ್‌ ಮಾಡಿದ ಪ್ರತಿಗಳನ್ನು ಮೈಲ್‌ ಅಥವಾ ವಾಟ್ಸ್ಯಾಪ್‌ ಮೂಲಕ ನಮಗೆ ಕಳಿಸಿ ಕೊಡಿಒಂದು ಪುಸ್ತಕದ ಎಲ್ಲಾ ಪುಟಗಳನ್ನು ಸ್ಕ್ಯಾನ್‌ ಮಾಡಿದ ನಂತರ “Share” ಮಾಡ ಹೊರಟಾಗ ಪಿಡಿಎಫ್ ಸ್ವರೂಪವನ್ನು ಆಯ್ದುಕೊಂಡು ನಮ್ಮ ಈಮೈಲಿಗೆ ಇಲ್ಲಾ ವಾಟ್ಸ್ಯಾಪ್‌ ಸಂಖ್ಯೆಗೆ ಕಳುಹಿಸಿ.

12.    ನೀವು ಮಾಡಿದ ಸ್ಕ್ಯಾನ್‌ ನಲ್ಲಿ ತಪ್ಪುಗಳಿದ್ದರೆ ನಾವು ನಿಮ್ಮ ಗಮನಕ್ಕೆ ತರುತ್ತೇವೆಆಗ ನೀವು ಸರಿಯಿಲ್ಲದ ಪೇಜುಗಳನ್ನು ಮತ್ತೆ ಸ್ಕ್ಯಾನ್‌ ಮಾಡಿಕೊಡಬೇಕಾಗಿ ಕೇಳುತ್ತೇವೆ. ಪುಸ್ತಕ ದಪ್ಪವಿದ್ದರೆ ಪುಸ್ತಕದ ಮಧ್ಯದ ಅಕ್ಷರಗಳು ಮಡಿಕೆಯಲ್ಲಿ ಮುಚ್ಚಿ ಹೋಗುವ ಅಪಾಯ ಇರುವುದರಿಂದ ಪುಸ್ತಕವನ್ನು ಬೇಕಾದ ಹಾಗೆ ಒತ್ತಿ ಒಂದು ಕೋನದಲ್ಲಿ ಹಿಡಿದುಕೊಳ್ಳಲು ಇನ್ನೊಬ್ಬರ ಸಹಾಯ ಬೇಕಾಗುತ್ತದೆ.

13. ನಿಮ್ಮ ಆಪ್ತರಲ್ಲಿ / ಸ್ನೇಹಿತರಲ್ಲಿ ಹಳೆಯ ಪ್ರತಿಗಳು ಇದ್ದು ಅದನ್ನು ನಮಗೆ ತಲುಪಿಸುವಲ್ಲಿ ನಿಮಗೆ ಸಹಾಯ ಮಾಡಲು ಸಾಧ್ಯವಾಗದಿರೆಅವರ ಅನುಮತಿಯಂತೆ ಅವರ ಸಂಪರ್ಕವನ್ನು ನಮಗೆ ದಯವಿಟ್ಟು ಕೊಡಿ.

14.    ನಿಮಗೆ ಕ್ಯಾಮ್ಸ್ಕ್ಯಾನ್‌ ಉಪಯೋಗಿಸಿದ ಅನುಭವ ಇಲ್ಲದಿರೆ ಅದನ್ನು ಕಲಿಯುವುದು ಸುಲಭವಿದೆ. ತಿಳಿದಿವರ ಹತ್ತಿರ ೫ ನಿಮಿಷಗಳಲ್ಲಿ ತೋರಿಸಿಕೊಂಡು ಕಲಿಯಿರಿ ಇಲ್ಲವೇ ಯೂಟ್ಯೂಬಿನಲ್ಲಿ ಈ ಸಂಬಂಧಿ ವಿಡಿಯೋಗಳನ್ನು ನೋಡಿ ಕಲಿಯಿರಿ. ಉದಾ: https://www.youtube.com/watch?v=LUQDCUl1L4g

ನಿಮ್ಮ ಸ್ವಯಂಸೇವೆಯ ಸಹಾಯವನ್ನೇ ನಂಬಿಕೊಂಡಿದ್ದೇವೆ.

ಸಂಪಾದಕ ಮಂಡಳಿ ಪ್ರಸಂಗಪ್ರತಿಸಂಗ್ರಹ ಯೋಜನೆ

ವಿಶ್ವಸ್ಥರುಯಕ್ಷವಾಹಿನಿ ಪ್ರತಿಷ್ಠಾನ

ಸಂಪರ್ಕ ವಿವರ:

ಈಮೈಲ್‌ : prasangaprathisangraha@gmail.com

ಮೊಬೈಲ್:‌ ನಟರಾಜ ಉಪಾಧ್ಯ – 9632824391 ಅಶ್ವಿನಿ ಹೊದಲ - 9686112237

Share:

ಡಿಸೆಂಬರ್‌ ೨೯, ೨೦೧೯: ಮತ್ತೆ ಸುಮಾರು ೫೦ ಪ್ರಸಂಗಗಳ ಸ್ಕ್ಯಾನ್‌ ಆಗಿ ಎರಡನೇ ಪ್ರಸಂಗ ಪ್ರತಿ ಸ್ಕ್ಯಾನ್‌ ಕಮ್ಮಟ ಸಂಪನ್ನ

ಬರೇ ೪ ಜನರ ಸ್ವಯಂಸೇವೆ ಸಿಕ್ಕರೂ ಸುಮಾರು ೫೦ ಪ್ರಸಂಗಗಳ ಸ್ಕ್ಯಾನ್‌ ಒಮ್ಮೆಲೇ ಆಗಿಹೋಗುವ ಮೂಲಕ ಎರಡನೇ ಪ್ರಸಂಗ ಸ್ಕ್ಯಾನ್‌ ಕಮ್ಮಟವು ಫಲಕಾರಿಯಾಗಿ ಸಂಪನ್ನವಾಯಿತು. ವಸಂತಕೃಷ್ಣರ ತಂದೆಯವರಾದ ಡಾ. ಪಟ್ಟಾಜೆ ಗಣೇಶ ಭಟ್ಟರ ಸಂಗ್ರಹದ ಹೆಚ್ಚಿನ ಪ್ರಸಂಗ ಪುಸ್ತಕಗಳು ಸ್ಕ್ಯಾನ್‌ ಆದವು. ಡಾ. ಆನಂದರಾಮ ಉಪಾಧ್ಯ ಹಾಗೂ ರವಿ ಮಡೋಡಿಯವರ ಸಂಗ್ರಹದ ಪ್ರಸಂಗ ಪುಸ್ತಿಕೆಗಳು ಮುಂದಿನ ಕಮ್ಮಟದ ನಿರೀಕ್ಷೆಯಲ್ಲಿ ಸಂಚಿಗಳಲ್ಲಿ ಹಾಗೇ ಉಳಿದವು.‌

ಈ ಕಮ್ಮಟದಲ್ಲಿ ಸ್ಕ್ಯಾನ್‌ ಆದ ಪ್ರಸಂಗಗಳು ಇನ್ನೊಂದು ವಾರದಲ್ಲೇ  ಒಪ್ಪಗೊಂಡು ನಮ್ಮ ಸಂಗ್ರಹದಲ್ಲಿ ಸೇರಿ ಸಂಗ್ರಹವು ೭೦೦ರ ಗಡಿ ದಾಟುವ ಶುಭ ಸಮಾಚಾರವನ್ನು ನಿರೀಕ್ಷಿಸಿರಿ. 

ಪ್ರಸಂಗಪ್ರತಿಸಂಗ್ರಹ  ಆಂಡ್ರೋಯ್ಡ್ ಆಪ್ ನ ಕೊಂಡಿ : 

ನಟರಾಜ ಉಪಾಧ್ಯರ ಮನೆಗೆ ವಸಂತಕೃಷ್ಣರು ಬೇಗ ಸೇರಿದ ಕೂಡಲೇ ಇಬ್ಬರೂ ಕುಳಿತು, ಅಕಾಡೆಮಿಯಲ್ಲಿ ಸಿಕ್ಕ ಮೂಡಲಪಾಯದ ಘನ ಕಲಾವಿದ ಹೊಸ ಹೆಮ್ಮಿಗೆಯ ಚಿಕ್ಕ ಚೌಡಯ್ಯ ನಾಯಕರ ಸಂಗ್ರಹದ ಮೂಡಲಪಾಯದಲ್ಲಿ ಬಳಕೆ ಇರುವ ೬ ಪ್ರಸಂಗಗಳ ಸ್ಕ್ಯಾನ್‌ ಮಾಡಿದರು.

ಅಷ್ಟೊತ್ತಿಗೇ ಅಶ್ವಿನಿ ಹೊದಲ ಅವರು ಮಗಳು ಅಮೂಲ್ಯಳೊಂದಿಗೆ ಸೇರಿಕೊಂಡಾಗ, ಸ್ಕ್ಯಾನಿಂಗಿಗೆ ವೇಗ ಬಂತು.

ಮಧ್ಯಾಹ್ನ ಊಟದ ನಂತರ, ಸೌಹಾರ್ದದ ಭೇಟಿಗೆ ಡಾ. ಆನಂದರಾಮ ಉಪಾಧ್ಯರು ಆಗಮಿಸಿದರು. ಮುಂದಿನ ಯೋಜನೆಯಾಗಬಲ್ಲ "ಯಕ್ಷಪುಸ್ತಕಸಂಗ್ರಹ" ಯೋಜನೆಗೆ ಪೂರ್ವಭಾವಿಯಾದ ಚರ್ಚೆಯನ್ನು ಮಾಡಿದೆವು. ಅದೇ ಸಂದರ್ಭದಲ್ಲಿ ವಸಂತಕೃಷ್ಣರು ಡಾ. ಆನಂದರಾಮ ಉಪಾಧ್ಯರಿಗೆ ಡಾ. ಪಟ್ಟಾಜೆ ಗಣೇಶಭಟ್ಟರ ಪ್ರಸಂಗ ಸಂಕಲನದ ಪುಸ್ತಕ, "ಯಕ್ಷ ದ್ವಾದಶಾಮೃತಮ್"‌ ಎಂಬ ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟರು.

 ಇದೇ ಪುಸ್ತಕವನ್ನು ವಸಂತಕೃಷ್ಣರು ಯಕ್ಷವಾಹಿನಿಯ ಗ್ರಂಥಾಲಯಕ್ಕೂ ಉಡುಗೊರೆಯನ್ನಾಗಿತ್ತದ್ದನ್ನು ನಟರಾಜ ಉಪಾಧ್ಯರು ಸ್ವೀಕರಿಸಿದರು.

ಕಮ್ಮಟ ಮುಗಿಯುವ ಸಮಯವಾದರೂ ಪಟ್ಟಾಜೆಯವರ ಪ್ರಸಂಗ ಸಂಗ್ರಹದ ಎಲ್ಲಾ ಪುಸ್ತಕಗಳ ಸ್ಕ್ಯಾನ್‌ ಮುಗಿದಿರಲಿಲ್ಲ, ಮನೆಯಲ್ಲಿ ತಾವೇ ಮಾಡಿ ಮುಗಿಸಿ, ತಂದೆಯವರಿಗೆ ಎಲ್ಲಾ ಪುಸ್ತಕಗಳನ್ನು ಶೀಘ್ರವಾಗಿ ಮರಳಿಸುವುದಾಗಿ ವಸಂತಕೃಷ್ಣರು ಹೇಳಿದರು.

ಕಮ್ಮಟದ ಉದ್ದಕ್ಕೂ ಕಾಫಿ, ಚಾ, ತಿಂಡಿಗಳು, ಊಟ ಇವುಗಳ ವ್ಯವಸ್ತೆಯ ಹಿಂದೆ ಅಖಿಲಾ ಮತ್ತು ಆಶಾ ಅವರು ಅತಿಥಿ ಸತ್ಕಾರಕ್ಕೆ ಸಾಕಷ್ಟು ಸಹಕರಿಸಿದರು. ಮೇಲಿನ ಆಶ್ರಮ ಗಾರ್ಡನ್ನಿನಲ್ಲಿ ಬೆಳೆದ ಕರಿಕೆಸುವಿನ ಪತ್ರೊಡೆ, ಸಾರು, ದಾಳಿಂಬೆ ಸಿಪ್ಪೆಯ ತಂಬುಳಿ ನಟರಾಜರಿಂದ ಬಂದರೆ, ಹುರುಳಿ ಸಾರು, ಹಾಲುಬಾಯಿ, ಕೋಡುಬಳೆ ಇತ್ಯಾದಿಗಳು ಅಶ್ವಿನಿ ಹೊದಲ ಅವರಿಂದ ಬಂದಿತ್ತು. ಹತ್ತಿರದ ಉತ್ತರ ಕರ್ನಾಟಕದ ಊಟ ತಂದಿದ್ದು ರುಚಿಯಾಗಿತ್ತು.
ಆಶಾ, ಅಖಿಲಾ

ಕಮ್ಮಟ ಮುಗಿಯುವ ಹೊತ್ತಿಗೆ ಅಮೂಲ್ಯ ಅವರು ತಮ್ಮ ಶಾಲೆಯಲ್ಲಿ ಯೋಜಿತವಾಗಿರುವ ಯಕ್ಷಗಾನ ನೃತ್ಯವೊಂದರ ಅಭ್ಯಾಸವನ್ನು ಪ್ರಸ್ತುತ ಪಡಿಸಿ ಮನರಂಜನೆಯನ್ನೂ ಕೊಟ್ಟರು.

 ಜನವರಿಯಲ್ಲಾಗುವ ಮುಂದಿನ ಕಮ್ಮಟವು ರಾಜರಾಜೇಶ್ವರಿನಗರದ ತಮ್ಮ ಮನೆಯಲ್ಲೇ ಎಂದು ವಸಂತಕೃಷ್ಣ ಪಟ್ಟಾಜೆಯವರು ಘೋಷಿಸಿ ತೆರಳಿದರು. ಸಂಚಿಯಲ್ಲೇ ಉಳಿದ ಪ್ರಸಂಗ ಪುಸ್ತಕಗಳು ಕಿಲಕಿಲ ನಕ್ಕು ನಲಿದವು.

ಕಥಕ್‌ ನೃತ್ಯ ತಾಲೀಮಿಗೆ ಹೋದ ಕಾರಣ, ಕೊನೆಯಲ್ಲಿ ತೆಗೆದ ಸಮೂಹಚಿತ್ರದಲ್ಲಿ ಅಖಿಲಾಳು ಬರದೇ ಉಳಿದಳು.

ವಂದನೆಗಳೊಂದಿಗೆ,
- ನಟರಾಜ ಉಪಾಧ್ಯ
Share:

ಕಾಂಕ್ರೀಟ್ ಮೇಲಿನ ಕಾಡಿನ ಕೆಳಗೆ ಎರಡನೇ ಸಾಮೂಹಿಕ ಪ್ರಸಂಗ ಸ್ಕ್ಯಾನಿಂಗ್ ಕಮ್ಮಟಕ್ಕೆ ನಿಮಗೆ ಸವಿನಯ ಆಮಂತ್ರಣ!

ಪ್ರಸಂಗಪ್ರತಿಸಂಗ್ರಹ ಯೋಜನೆಯಡಿ ಪ್ರತಿಗಳ ಸಂಖ್ಯೆ ೬೦೦ ಪ್ರತಿಗಳ ಗಡಿ ದಾಟಿ ೭೦೦ಕ್ಕೆ ಹತ್ತಿರವಾಗುತ್ತಿದೆ. ಆದರೆ ಸುಮಾರು ೪,೦೦೦ ಪ್ರತಿಗಳ ದೂರದ ಗುರಿ ಮುಟ್ಟಬೇಕಾದರೆ ನಮ್ಮ ಸ್ವಯಂಸೇವೆಯ ಒಗ್ಗಟ್ಟಿನ ಕೆಲಸ ಹೆಚ್ಚೆಚ್ಚು ಆಗಬೇಕಾಗಿದೆ. ಈ ಪ್ರಯುಕ್ತ ಎರಡನೇ  ಸಾಮೂಹಿಕ ಪ್ರಸಂಗ ಸ್ಕ್ಯಾನಿಂಗ್ ಕಮ್ಮಟ” ವನ್ನು ಇದೇ ಭಾನುವಾರ, ಡಿಸೆಂಬರ್ನ‌ ೨೯, ೨೦೧೯ರಂದು ನಡೆಸುತ್ತಿದ್ದೇವೆ.   

ನಿಮ್ಮೊಂದಿಗಿರುವ ಸ್ಪಷ್ಟವಾಗಿ ಸ್ಕ್ಯಾನ್ ಮಾಡಬಲ್ಲ  ಸ್ಮಾರ್ಟ್ ಫೋನುಗಳೇ ಪರಿಣಾಮಕಾರಿ ಆಯುಧಗಳಾಗಿ ಸಹಕರಿಸಲಿವೆ.  ಯಕ್ಷಪ್ರೇಮಿ ಸ್ವಯಂಸೇವಕರೆಲ್ಲಾ ಅಂದು ನಮ್ಮೊಂದಿಗೆ ಕೆಲವು ಗಂಟೆಗಳ ಕಾಲ ಸೇರಿ ಸಹಕರಿಸಿ.  ಬೆಳಿಗ್ಗೆ ೧೦ ಘಂಟೆಯಿಂದ ಸಂಜೆ ೫ ರ ತನಕ ನಡೆಯುವ ಈ ಕಮ್ಮಟದಲ್ಲಿ ಭಾಗವಹಿಸುವವರಿಗೆ ಊಟ, ತಿಂಡಿ, ಕಾಫಿ / ಚಾಗಳ ವ್ಯವಸ್ಥೆ ಇರುತ್ತದೆ. ಕೆಲಸದ ಜೊತೆಗೆ ಯಕ್ಷಗಾನದ ವಾತಾವರಣ ಸೃಷ್ಟಿಸಿಕೊಂಡು ಸ್ವಲ್ಪ ಗಮ್ಮತ್ತು ಕೂಡಾ ಮಾಡೋಣ!

ಯಾವತ್ತು: ಇದೇ ಭಾನುವಾರಡಿಸೆಂಬರ್ ೨೯ನೇ ತಾರೀಖು೨೦೧೯
ಯಾವಾಗ: ಬೆಳಿಗ್ಗೆ ೧೦ ಘಂಟೆಯಿಂದ ಮಧ್ಯಾಹ್ನ  ೫ ಘಂಟೆಯ ತನಕ, ಶಕ್ತಿ ಉಳಿದವರಿಗೆ ಆರು ಘಂಟೆಯ ತನಕ ಎಳೆಯೋಣ (೧೧ ಘಂಟೆಗ ಲಘು ಉಪಾಹಾರ, ೧ ಘಂಟೆಗೆ ಊಟ, ೩ ಘಂಟೆಗೆ ಕಾಫಿ ./ ಚಾ, ೫ ಘಂಟೆಗೆ ಮತ್ತೆ ತಿಂಡಿ)
ಎಲ್ಲಿ: ನಟರಾಜ ಉಪಾಧ್ಶರ ಕಾಡಿನ ಮನೆ
#82, Ashrama, First Main, Vivekanandanagara, 
Katriguppe Main Road, Bengaluru 560085

ಸ್ಥಳ ನಕ್ಷೆOpposite L N General Store

ನೀವು ಬರುವುದನ್ನು ಮೊದಲೇ ತಿಳಿಸಿ ಖಾತ್ರಿಗೊಳಿಸಿ.  ದೂರವಾಣಿ: 9632824391

ನೀವು ಹೊರಡುವ ಮುನ್ನ: ಈವರೆಗೆ ಸ್ಕ್ಯಾನ್ ಆಗದ ನಿಮ್ಮಲ್ಲಿರುವ ಅಪರೂಪದ ಪ್ರಸಂಗ ಪುಸ್ತಕಗಳಿದ್ದರೆ ಅವುಗಳನ್ನು ಹೊತ್ತು ತನ್ನಿ. ಸ್ಮಾರ್ಟ್ ಫೋನ್ಚಾರ್ಜರ್ಪವರ್ ಬ್ಯಾಂಕುಗಳನ್ನು ಹಿಡಿದುಕೊಂಡೇ ಬನ್ನಿ.

ಯಕ್ಷಗಾನಕ್ಕಾಗಿ ನಿಮ್ಮ ಅಳಿಲು ಸೇವೆಗೆ  ಇದೊಂದು ಅಪೂರ್ವ ಅವಕಾಶ!

ನಿಮ್ಮ ಸಹಕಾರಕ್ಕೆ ವಂದಿಸುವ,

- ನಟರಾಜ ಉಪಾಧ್ಯ, ಪ್ರಸಂಗಪ್ರತಿಸಂಗ್ರಹ ಯೋಜನೆ ಹಾಗೂ ಯಕ್ಷವಾಹಿನಿ (ರಿ) ಸಂಸ್ಥೆಯ ಪರವಾಗಿ

Share:

ನಯನ ರಂಗಮಂದಿರದಲ್ಲಿ “ಯಕ್ಷಗಾನ ಪ್ರಸಂಗಗಳ ಡಿಜಿಟಲೀಕರಣ ಲೋಕಾರ್ಪಣೆ ಸಮಾರಂಭ ಹಾಗೂ ಯಕ್ಷರೂಪಕ ಪಂಚಪಾವನ ಕಥಾ”

ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷವಾಹಿನಿ ಸಂಸ್ಥೆಯ ಸಹಯೋಗದಲ್ಲಿ ದಿನಾಂಕ 27.12.2019ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದ ನಯನ ರಂಗಮಂದಿರದಲ್ಲಿ “ಯಕ್ಷಗಾನ ಪ್ರಸಂಗಗಳ ಡಿಜಿಟಲೀಕರಣ ಲೋಕಾರ್ಪಣೆ ಸಮಾರಂಭ ಹಾಗೂ ಯಕ್ಷರೂಪಕ ಪಂಚಪಾವನ ಕಥಾ” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ತಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿ ವಿನಂತಿ.

ದಯವಿಟ್ಟು ಇದೇ ಆಮಂತ್ರಣವೆಂದು ಬನ್ನಿ, ಬಂದು ಚೆಂದಗಾಣಿಸಿ
 - ಯಕ್ಷಪ್ರಸಂಗಕೋಶ ಯೋಜನಾ ಸಮೂಹ ಹಾಗೂ ಯಕ್ಷವಾಹಿನಿ ತಂಡ
Share:

ಒಂದೇ ಗೂಗಲ್‌ ಪ್ಲೇ ಸ್ಟೋರಿನ ಆಪ್‌ ನ ಮೂಲಕ "ಪ್ರಸಂಗಪ್ರತಿಸಂಗ್ರಹ" ಹಾಗೂ "ಯಕ್ಷಪ್ರಸಂಗಕೋಶ" ಈ ಎರಡೂ ಯೋಜನೆಗಳ ಎಲ್ಲಾ ಪ್ರಸಂಗಗಳು ಈಗ ನಿಮ್ಮ ಮೊಬೈಲಿನಲ್ಲಿ ಸುಲಭ ಲಭ್ಯ!

ಮುಡಿಪಿನ ಸ್ವಯಂಸೇವೆಯಿಂದಲೇ ಮಿಂಚುತ್ತಿರುವ ಯಕ್ಷವಾಹಿನಿಯ ಯಕ್ಷಾಭಿಮಾನಿ ಯಕ್ಷಸೇವಕರ ಸಮೂಹದ ಯಶಸ್ಸಿನ ಮುಡಿಗೆ ಇನ್ನೊಂದು ಚಿನ್ನದ ಗರಿ ಏರಿದೆ. ಯಕ್ಷಗಾನದ ಪ್ರಸಂಗಪ್ರತಿಸಂಗ್ರಹ ಯೋಜನೆಯಲ್ಲಿ ಸಂಗ್ರಹಿಸಲ್ಪಟ್ಟ ಪ್ರಸಂಗಪ್ರತಿಗಳನ್ನು  ಯಕ್ಷಪ್ರೇಮಿಗಳಿಗೆ ಉಚಿತವಾಗಿ ಲಭಿಸುವಂತೆ ಮಾಡುವುದರ ಜೊತೆಗೇ ಸಂಬಂಧಿತ ಯಕ್ಷಪ್ರಸಂಗಕೋಶ ಯೋಜನೆಯಲ್ಲಿಯೂ ಪ್ರಕಟವಾಗಿರುವ ಪ್ರಸಂಗ ಪುಸ್ತಕಗಳ ವಿದ್ಯುನ್ಮಾನ ಪ್ರತಿಗಳನ್ನು ಸುಲಭವಾಗಿ ಆಸಕ್ತರಿಗೆ ಲಭ್ಯವಾಗುವಂತೆ ಮಾಡುವುದಕ್ಕೋಸ್ಕರ ಆಂಡ್ರಾಯ್ಡ್‌ ಆಪ್‌ ಅನ್ನು (android app) ಸಿದ್ಧಪಡಿಸಲಾಗಿ ಬಿಡುಗಡೆ ಮಾಡಲಾಗಿದೆ.

ಇದನ್ನು ನಿಮ್ಮ ಮೊಬೈಲ್ ನಲ್ಲಿ ಅನುಸ್ಥಾಪಿಸಿಕೊಳ್ಳುವ ಮೂಲಕ ಎರಡೂ ಯೋಜನೆಗಳಿಗೆ ಸಂಬಂಧಿಸಿದ ಎಲ್ಲಾ ಪ್ರಸಂಗಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು. (ಪ್ರಸಂಗಪ್ರತಿಸಂಗ್ರಹ ಯೋಜನೆ: ಅಂತರಜಾಲದ ಮೂಲಕ ಉಚಿತ ಪ್ರಸಾರಕ್ಕಾಗಿಯೇ,  ಹಕ್ಕು ಸ್ವಾಮ್ಯದವರ ಅನುಮತಿಯ ಮೇರೆಗೆ,ಬೇರೆ ಬೇರೆ ಪ್ರಕಾಶನಗಳ ಯಾ ಹಸ್ತಪ್ರತಿಗಳ ಸ್ಕ್ಯಾನ್‌ ಪ್ರತಿಗಳ ಸಂಗ್ರಹ; ಯಕ್ಷಪ್ರಸಂಗಕೋಶ ಯೋಜನೆ: ಪ್ರಸಂಗ ಕವಿಯ ಮೂಲ ಹಕ್ಕು ಸ್ವಾಮ್ಯ ಹಾಗೂ ಅನುಮತಿಯ ಪರಿಧಿಯಲ್ಲೇ ಯಕ್ಷವಾಹಿನಿಯ ಸಮೂಹದಿಂದ ವಿದ್ಯುನ್ಮಾನ ಪ್ರತಿಯಾಗಿ ಮಾರ್ಪಟ್ಟು, ಯಕ್ಷಗಾನ ಸಾಹಿತ್ಯ ಹಾಗೂ ಛಂದಸ್ಸಿನ ತಜ್ಞರಿಂದ ಬೇಕಿದ್ದಲ್ಲಿ ಪರಿಷ್ಕೃತಗೊಂಡು ಅಂತರಜಾಲದಲ್ಲಿ ಉಚಿತ ಪ್ರಸಾರಕ್ಕಾಗಿಯೇ ಪ್ರಕಾಶನಗೊಂಡ ಪ್ರಸಂಗಗಳ ಕೋಶ)

ಆಪ್ ನ ಕೊಂಡಿ : 

ಈ ಆಪ್ ನ ಪರಿಕಲ್ಪನೆ, ನಿರ್ಮಾಣ ಮತ್ತು ನಿರ್ವಹಣೆಯ ಭಾರವನ್ನು ಪೂರ್ಣ ಹೊತ್ತು ತಮ್ಮದೇ ಖರ್ಚಿನಲ್ಲಿ ಗೂಗಲ್‌ ಪ್ಲೇ ಸ್ಟೋರಿನಲ್ಲಿ ಸ್ಥಾಪಿಸಿ ಎಂದಿನ ಯಕ್ಷಸೇವೆಯ ಕೈಂಕರ್ಯದಲ್ಲಿ ಇದೊಂದು ಸಾಮಾನ್ಯ ಹೆಜ್ಜೆ ಎಂಬುದಾಗಿ ಹೆಗ್ಗಳಿಕೆ ಒಲ್ಲದ ಹಿರಣ್ಯಮಯಿಯೇ ಲ. ನಾ. ಭಟ್‌ (ಲಕ್ಷ್ಮೀನಾರಾಯಣ ಕೆ. ಜೆ.). ಇವರೊಂದಿಗೆ ಇದರ ಗುಣಮಟ್ಟದ ಉತ್ತುಂಗಕ್ಕಾಗಿ ಅವರಿಗೆ ಭುಜ ಕೊಟ್ಟು ಶ್ರಮಿಸಿದವರು ಅವಿನಾಶ್‌ ಬೈಪಡಿತ್ತಾಯ ಮತ್ತು ಅಶ್ವಿನಿ ಹೊದಲ. ಇವೆರೆಲ್ಲರಿಗೆ ಅಭಿಮಾನದ ಅಭಿನಂದನೆಗಳು ಮತ್ತು ವಿನಯಪೂರ್ವಕ ವಂದನೆಗಳು.  

ವಿ. ಸೂ.: ಈಗಾಗಲೇ ಇದರ ಪ್ರಾಯೋಗಿಕ ಆವೃತ್ತಿಯನ್ನು ಅನುಸ್ಥಾಪಿಸಿಕೊಂಡಿದ್ದಲ್ಲಿ ಅದನ್ನು uninstall ಮಾಡಿದ ಬಳಿಕ ಗೂಗಲ್ ಪ್ಲೇಸ್ಟೋರ್ ನಿಂದ ಹೊಸ ಆವೃತ್ತಿಯನ್ನು ಅನುಸ್ಥಾಪಿಸಿಕೊಳ್ಳಿ.

ಮತ್ತೊಮ್ಮೆ ಈ ಯಶಸ್ಸಿಗಾಗಿ ನಮ್ಮ ಸಮೂಹದ ಎಲ್ಲರಿಗೂ ವಂದನೆ / ಅಭಿನಂದನೆಗಳೊಂದಿಗೆ,

-        -  ನಟರಾಜ ಉಪಾಧ್ಯ, ಪ್ರಸಂಗಪ್ರತಿಸಂಗ್ರಹ ಯೋಜನೆ, ಯಕ್ಷಪ್ರಸಂಗಕೋಶ ಯೋಜನೆ, ಯಕ್ಷವಾಹಿನಿ ಸಂಸ್ಥೆ ಮತ್ತು ಸಮೂಹದ ಎಲ್ಲರ ಪರವಾಗಿ ಈ ಯಶಸ್ಸಿನ ಸಂತಸದಲ್ಲಿ ಸಮಭಾಗಿ.

Share:

600ರ ಗಡಿ ದಾಟಿದ ಪ್ರಸಂಗಪ್ರತಿಸಂಗ್ರಹ - ಪದೇ ಪದೇ ಪ್ರಸಂಗಪ್ರತಿ ಸ್ಕ್ಯಾನಿಂಗ್‌ ಕಮ್ಮಟಗಳು ಅಲ್ಲಲ್ಲಿ ನಡೆಯಬೇಕಾಗಿವೆ!

ಪ್ರಸಂಗಪ್ರತಿಸಂಗ್ರಹವು ೬೦೦ರ ಗಡಿ ದಾಟಿದೆ ಎನ್ನಲು ಸಂತಸವಾಗುತ್ತಿದೆ. ಇತ್ತೀಚಿನ ಪ್ರಸಂಗಪ್ರತಿ ಸ್ಕ್ಯಾನಿಂಗ್‌ ಕಮ್ಮಟದಲ್ಲಿ ಸ್ಕ್ಯಾನ್‌ ಆದ ಪ್ರಸಂಗಗಳು ಇನ್ನೂ ಸೇರಿಲ್ಲ,  ಇದೇ ಡಿಸೆಂಬರ್‌ ತಿಂಗಳ ಕೊನೆಯಲ್ಲಿ ಬೆಂಗಳೂರಿನಲ್ಲೇ ಇನ್ನೊಂದು ಕಮ್ಮಟ ನಡೆಸುವ ಗುರಿ ಇದೆ. ಮುಂದೆ ಎಲ್ಲೆಲ್ಲಿ ನೂರಾರು ನಮ್ಮ ಸಂಗ್ರಹದಲ್ಲಿ ಇರದ ಪ್ರಸಂಗ ಪುಸ್ತಕಗಳು ಲಭ್ಯವೋ ಅಲ್ಲಲ್ಲಿ ಸ್ಕ್ಯಾನಿಂಗ್‌ ಕಮ್ಮಟಗಳನ್ನು ನಡೆಸುವ ಸ್ವಯಂಸೇವಕರು ಒಟ್ಟಾದರೆ, ತಿಂಗಳಿಗೆ ಒಂದು ಕಮ್ಮಟವಾದರೂ ನಡೆದು ನಾವು ೪,೦೦೦ ಪ್ರಸಂಗಪ್ರತಿಗಳ ಗುರಿಯತ್ತ ಬೇಗ ಸಾಗುವುದು ಸಾಧ್ಯ ಎನ್ನಿಸುತ್ತಿದೆ.

ಹಳೆಯ ಕೃತಿಗಳ ಜೊತೆಗೆ ಸಮಕಾಲೀನ ಕೃತಿಗಳೂ ಸೇರುತ್ತಿವೆ. ಸಮಕಾಲೀನ ಕೃತಿಗಳ ಕುರಿತಾಗಿ ಅವುಗಳ ಕವಿ ಹಾಗೂ ಪ್ರಕಾಶಕರ ಒಪ್ಪಿಗೆ ನೇರವಾಗಿ ಇಲ್ಲಾ ಪರೋಕ್ಷವಾಗಿ ತೆಗೆದುಕೊಳ್ಳುತ್ತಿದ್ದೇವೆ. ಒಪ್ಪಿಗೆ ಸಿಗದಿದ್ದರೆ ಅವುಗಳನ್ನು ತಡೆ ಹಿಡಿದು, ಮುಂದೆ ಸಿಗಬಹುದೆಂಬ ಆಶಯದಲ್ಲಿ ಇದ್ದೇವೆ. ಇಲ್ಲಿ ಒಂದು ಸೂಕ್ಷ್ಮ ವಿಚಾರವಿದೆ. ಅಂತರಜಾಲದಲ್ಲಿ ಸ್ಕ್ಯಾನ್‌ ಆದ ಪ್ರತಿ ಸೇರಿದರೆ ಅವುಗಳ ಮುದ್ರಿತ ಪ್ರತಿಗಳ ಮಾರಾಟಕ್ಕೆ ಪೆಟ್ಟು ಬೀಳಬಹುದು. ಆದರೆ ಪ್ರಚಾರ ಮತ್ತು ಜನಪ್ರಿಯತೆ ವಿಚಾರದಲ್ಲಿ ಅಂತರಜಾಲ ಸ್ಕ್ಯಾನ್ ಪ್ರತಿಗಳು ಕವಿ ಮತ್ತು ಪ್ರಕಾಶಕರಿಗೆ ಹೆಚ್ಚಿನ ಖ್ಯಾತಿ, ಗೌರವ ಸಂದಾಯವನ್ನು ತರಬಹುದು. ಒಟ್ಟಿನಲ್ಲಿ, ಮುದ್ರಿತ ಪ್ರಸಂಗಪುಸ್ತಕಗಳ ಮಾರಾಟದಿಂದ ಹಣ ಮಾಡುವ ನಿರೀಕ್ಷೆ ಇಲ್ಲದವರು ನಮ್ಮೊಂದಿಗೆ ಕೂಡಲೇ ಸಹಕರಿಸುವುದು ಎಲ್ಲರೂ ಗೆಲ್ಲುವ ತಂತ್ರವೇ ಆಗಿದೆ. ಯಕ್ಷಗಾನದಿಂದ ಬದುಕು ಆಗುವವರ ಹೊಟ್ಟೆಯ ಮೇಲೆ ಪೆಟ್ಟು ನಮ್ಮಿಂದ ಆಗಬಾರದು ಎಂಬ ಕಳಕಳಿ ನಮ್ಮದು. ಅದರಲ್ಲೂ ಮುಖ್ಯವಾಗಿ ಹೆಚ್ಚಿನ ಮನ್ನಣೆಗೆ ಅರ್ಹರಾಗಿರುವ ಅದರಲ್ಲೂ ಸಮಕಾಲೀನರಾಗಿರುವ ಪ್ರಸಂಗಕವಿಗಳಿಗೆ ನಮ್ಮ ಯೋಜನೆಯಿಂದ ತೊಂದರೆ ಆಗಬಾರದು. ಆದುದರಿಂದ ಕವಿಗಳ ಮತ್ತು ಪ್ರಕಾಶಕರ ಪೂರ್ವ ಅನುಮತಿ ಅತೀ ಅವಶ್ಯ. ಈ ನಿಟ್ಟಿನಲ್ಲಿ   ಕವಿಗಳ ಮತ್ತು ಪ್ರಕಾಶಕರ ಖಚಿತವಾದ ಅನುಮತಿಗಳನ್ನು ಕೊಡಿಸುವಲ್ಲಿ ಅನೇಕ ಸ್ವಯಂಸೇವಕರ ಸಹಾಯ ನಮಗೆ ಬೇಕೇ ಬೇಕು. ಅಂತಹವರಲ್ಲಿ ನೀವೂ ಒಬ್ಬರಿರಬಹುದು, ದಯವಿಟ್ಟು ಯೋಚಿಸಿ.

ನಮಗೆ ಸಹಕರಿಸಲು ಹೊರಟಿರುವ ನಿಮ್ಮ ಸಮಯ ಮತ್ತು ಶಕ್ತಿಯು ಅಮೂಲ್ಯವಾದುದುಆ ನಿಟ್ಟಿನಲ್ಲಿ ಈ ಕೆಳಗಿನ ಅಂಶಗಳನ್ನು ಹಂಚಿಕೊಳ್ಳುತ್ತಿದ್ದೇವೆ.

1.   ತಮ್ಮಲ್ಲಿರುವ ಯಾ ತಮ್ಮ ವಲಯದಲ್ಲಿರುವವರ ಪ್ರಸಂಗಗಳ ಹೆಸರುಕವಿಪ್ರಕಾಶನ (ಹಸ್ತಪ್ರತಿಯೂ ನಮಗೆ ಪ್ರಕಾಶನದ ಲೆಕ್ಕವೇ) ಗಳ ವಿವರವನ್ನು ಪಟ್ಟಿಯಾಗಿ ನಮಗೆ ಕಳಿಸಿದಲ್ಲಿಈಗಾಗಲೇ ಸಂಗ್ರಹದಲ್ಲಿ ಇರುವ ಪ್ರತಿಗಳನ್ನು ಹೊರತುಪಡಿಸಿ ಬೇಕಾದ ಉಳಿದದ್ದನ್ನುಮಾತ್ರ ಸಂಗ್ರಹಕ್ಕೆ ಸೇರಿಸುವ ಭಾರ ಉಳಿಯುತ್ತದೆ. ಇಲ್ಲಿಯೂ ಕೂಡಾ ನಿಮ್ಮಲ್ಲಿರುವ ನಮಗೆ ಬೇಕಾದ ಪ್ರಸಂಗಗಳ ಪಟ್ಟಿ ಉದ್ದವಿದ್ದಾಗನೀವು ಕೊಡುವ ಮೊದಲೇ ನಮಗೆ ಸಿಕ್ಕರೆ ನಿಮ್ಮ ಕೆಲಸವನ್ನು ಉಳಿಸಬಹುದುಹಾಗಾಗಿಯೇ ಉದ್ದ ಪಟ್ಟಿಯಲ್ಲಿ ನೀವು ಈಗಲೇ ಸ್ಕ್ಯಾನ್‌ ಮಾಡಲು ಹೊರಟ ಪ್ರತಿಗಳ ಬಗ್ಗೆ ತಿಳಿಸಿಯೇ ಪ್ರಾರಂಭಿಸಿಕೊನೆಯ ನಿಮಿಷದ ಸೇರ್ಪಡೆ ಇದ್ದಾಗ ನಿಮ್ಮ ಕೆಲಸವನ್ನು ಅಲ್ಲಿ ಉಳಿಸುವುದು ನಮ್ಮ ಧರ್ಮ.

2.   ಸಮಕಾಲೀನ ಕವಿಗಳ ಪ್ರತಿಗಳಿದ್ದರೆನಮ್ಮ ಪರವಾಗಿ ನೀವೇ ಅವರ ಅನುಮತಿ ಕೊಡಿಸಿದರೆ ನಮಗೆ ಸುಲಭಇಲ್ಲದಿರೆ ಅವರ ಸಂಪರ್ಕ ವಿವರವಿದ್ದರೆ ಕೊಡಿಇಲ್ಲದಿರೆ ಸ್ಕ್ಯಾನ್‌ ಮಾಡಿ ಕಳುಹಿಸುವುದನ್ನು ನಿಲ್ಲಿಸಬೇಡಿ. ನಾವೇ ಕವಿಯ ಅನುಮತಿ ಪಡೆಯಲು ಪ್ರಯತ್ನಿಸುತ್ತೇವೆ. ಅನುಮತಿ ಸಿಗುವ ತನಕ ತಾವು ಕಳುಹಿಸಿದ ಸ್ಕ್ಯಾನ್‌ ಪ್ರತಿಗಳನ್ನುತಡೆಹಿಡಿದರೂ ಕ್ರಮೇಣ ಅವು ನಮ್ಮ ಸಂಗ್ರಹದಲ್ಲಿ ಸೇರಿ ನಿಮ್ಮ ಪ್ರಯತ್ನ ಸಾರ್ಥಕವಾಗುತ್ತದೆ.  

3.   ಸ್ಕ್ಯಾನ್‌ ಮಾಡುವ ಮೊದಲು ಆ ಪ್ರಸಂಗವು ಈಗಾಗಲೇ ಪ್ರಸಂಗಪ್ರತಿ ಸಂಗ್ರಹದಲ್ಲಿ ಲಭ್ಯವಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ನಂತರ ಮುಂದುವರೆಯಿರಿಆ ಕುರಿತು ನಿಮಗೆ ಕೋಷ್ಟಕದಲ್ಲಿ ಹುಡುಕುವುದು ಕಷ್ಟವೆನಿಸಿದರೆ ನಮ್ಮನ್ನುಕೇಳಿಖಚಿತಪಡಿಸುತ್ತೇವೆ.

4.   ಪ್ರತಿಗಳನ್ನು ಸ್ಕ್ಯಾನ್‌ ಮಾಡಲು ಕ್ಯಾಮ್‌ ಸ್ಕ್ಯಾನ್‌ (CamScan) ಎಂಬ ತಂತ್ರಾಂಶವನ್ನು ಪ್ಲೇಸ್ಟೋರ್‌ ನ ಮೂಲಕ ಮೊಬೈಲ್ಗೆ ಇಳಿಸಿಕೊಂಡು ಉಪಯೋಗಿಸಬಹುದು.

5.   ಪ್ರತಿಯ ಮುಖಪುಟದಿಂದ ಪ್ರಾರಂಭಿಸಿ ಕೊನೆಯ ರಕ್ಷಾಪುಟದವರೆಗೆ ಸ್ಕ್ಯಾನ್‌ ಇರಲಿಹಿಂದೆ ಆಗಿ ಹೋದ ಪ್ರಕಾಶನಕ್ಕೆ ಪೂರ್ಣ ನ್ಯಾಯಕೊಡುವುದು ನಮ್ಮ ಧರ್ಮ.

6.   ಸ್ಕ್ಯಾನ್‌ ಮಾಡುವಾಗ ಪುಟದ ಅಂಚುಗಳು ಕತ್ತರಿಸಿಹೋಗಿಲ್ಲ ಎಂಬುದನ್ನು ಗಮನಿಸಿಎರಡು ಎದುರು ಪುಟಗಳ ನಡುವಿನ ಅಕ್ಷರಗಳು ನುಂಗಿ ಹೋಗಿಲ್ಲ ಎಂಬುದನ್ನೂ ಖಾತ್ರಿ ಮಾಡಿಕೊಳ್ಳಿರಿ.

7.   ಪುಟಗಳು ಮತ್ತು ಅಕ್ಷರಗಳು ಸ್ಪಷ್ಟವಾಗಿ ಕಾಣುವಂತೆ ಸ್ಕ್ಯಾನ್‌ ಇರಲಿಇದಕ್ಕಾಗಿ ಕ್ಯಾಮೆರಾದ ಸ್ಕ್ರೀನನ್ನು ಒಮ್ಮೆ ಒತ್ತಿ ಫೋಕಸ್‌ ಮಾಡಿಕೊಳ್ಳಬೇಕಾಗಬಹುದು.  ಒಳ್ಳೇ ನೈಸರ್ಗಿಕ ಬೆಳಕಿನಲ್ಲಿ ಫ್ಲಾಷ್‌ ಇಲ್ಲದೇ ತೆಗೆದ ಸ್ಕ್ಯಾನ್‌ ಪ್ರತಿ ಓದಲು ಸ್ಪಷ್ಟವಿರುತ್ತದೆ.

8.   ಪುಟಗಳು ಓರೆಕೋರೆಯಾಗಿರದೆ ನೇರವಾಗಿರಲಿಸಣ್ಣ ಮಟ್ಟದ ಓರೆಕೋರೆಗಳನ್ನು ಕ್ಯಾಮ್‌ ಸ್ಕ್ಯಾನ್‌ ತಾನೇ ಸರಿಪಡಿಸುತ್ತದೆ. ಕೆಲವೊಮ್ಮೆ ಸ್ಕ್ಯಾನ್‌ ಆದ ನಂತರ ಕ್ಯಾಮ್ಸ್ಕ್ಯಾನ್‌ ಪೂರ್ಣ ಪುಟವನ್ನು ಆರಿಸಿಕೊಂಡಂತೆ ತೋರಿಸದೇ ಇದ್ದಾಗನೀವು ಅದು ಹಾಕಿದ ಗೆರೆಗಳನ್ನು ತಿದ್ದಿ ಪೂರ್ಣ ಪುಟಕ್ಕೆ ವಿಸ್ತರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅದು ಹಾಕಿಕೊಟ್ಟ ಗೆರೆಯನ್ನು ಮಧ್ಯದಲ್ಲಿ ದೂಕಿದರೆ ಇಡೀ ಗೆರೆಯೇ ನಿಮಗೆ ಬೇಕಾದಂತೆ ಚಲಿಸುತ್ತದೆಮೂಲೆಯಿಂದ ತಳ್ಳಿದರೆ ಮೂಲೆ ಮಾತ್ರ ಚಲಿಸುತ್ತದೆ. ನಿಮಗೆ ಬೇಕಾದಂತೆ ಚಲನೆಯ ಕ್ರಮವನ್ನು ಆಯ್ದುಕೊಳ್ಳಿ.

9.   ಅಕ್ಕಪಕ್ಕದ ಪುಟಗಳನ್ನು ಒಂದೊಂದಾಗಿ ಸ್ಕ್ಯಾನ್‌ ಮಾಡುವುದರ ಬದಲಾಗಿ ಎರಡೂ ಒಂದೇ ಪುಟದಲ್ಲಿ ಬರುವಂತೆ ಮಾಡಿದರೆ ಸಮಯ ಮತ್ತು ಫೈಲ್ನ ಗಾತ್ರ ಎರಡನ್ನೂ ಕಡಿಮೆ ಮಾಡಬಹುದುಮುಖ್ಯವಾಗಿ ಎಲ್ಲಾ ಅಕ್ಷರಗಳು ಓದುವಂತಿರಬೇಕು.

10.    ಸ್ಕ್ಯಾನ್‌ ಕಾರ್ಯ ಮುಗಿದ ನಂತರ ಯಾವುದೇ ಪುಟ ಬಿಟ್ಟುಹೋಗಿಲ್ಲ ಎಂಬುದನ್ನು ಮತ್ತೊಮ್ಮೆ ಗಮನಿಸಿ.

11.    ಸ್ಕ್ಯಾನ್‌ ಮಾಡಿದ ಪ್ರತಿಗಳನ್ನು ಮೈಲ್‌ ಅಥವಾ ವಾಟ್ಸ್ಯಾಪ್‌ ಮೂಲಕ ನಮಗೆ ಕಳಿಸಿ ಕೊಡಿಒಂದು ಪುಸ್ತಕದ ಎಲ್ಲಾ ಪುಟಗಳನ್ನು ಸ್ಕ್ಯಾನ್‌ ಮಾಡಿದ ನಂತರ “Share” ಮಾಡ ಹೊರಟಾಗ ಪಿಡಿಎಫ್ ಸ್ವರೂಪವನ್ನು ಆಯ್ದುಕೊಂಡು ನಮ್ಮ ಈಮೈಲಿಗೆ ಇಲ್ಲಾ ವಾಟ್ಸ್ಯಾಪ್‌ ಸಂಖ್ಯೆಗೆ ಕಳುಹಿಸಿ.

12.    ನೀವು ಮಾಡಿದ ಸ್ಕ್ಯಾನ್‌ ನಲ್ಲಿ ತಪ್ಪುಗಳಿದ್ದರೆ ನಾವು ನಿಮ್ಮ ಗಮನಕ್ಕೆ ತರುತ್ತೇವೆಆಗ ನೀವು ಸರಿಯಿಲ್ಲದ ಪೇಜುಗಳನ್ನು ಮತ್ತೆ ಸ್ಕ್ಯಾನ್‌ ಮಾಡಿಕೊಡಬೇಕಾಗಿ ಕೇಳುತ್ತೇವೆ. ಪುಸ್ತಕ ದಪ್ಪವಿದ್ದರೆ ಪುಸ್ತಕದ ಮಧ್ಯದ ಅಕ್ಷರಗಳು ಮಡಿಕೆಯಲ್ಲಿ ಮುಚ್ಚಿ ಹೋಗುವ ಅಪಾಯ ಇರುವುದರಿಂದ ಪುಸ್ತಕವನ್ನು ಬೇಕಾದ ಹಾಗೆ ಒತ್ತಿ ಒಂದು ಕೋನದಲ್ಲಿ ಹಿಡಿದುಕೊಳ್ಳಲು ಇನ್ನೊಬ್ಬರ ಸಹಾಯ ಬೇಕಾಗುತ್ತದೆ.

13. ನಿಮ್ಮ ಆಪ್ತರಲ್ಲಿ / ಸ್ನೇಹಿತರಲ್ಲಿ ಹಳೆಯ ಪ್ರತಿಗಳು ಇದ್ದು ಅದನ್ನು ನಮಗೆ ತಲುಪಿಸುವಲ್ಲಿ ನಿಮಗೆ ಸಹಾಯ ಮಾಡಲು ಸಾಧ್ಯವಾಗದಿರೆಅವರ ಅನುಮತಿಯಂತೆ ಅವರ ಸಂಪರ್ಕವನ್ನು ನಮಗೆ ದಯವಿಟ್ಟು ಕೊಡಿ.

14.    ನಿಮಗೆ ಕ್ಯಾಮ್ಸ್ಕ್ಯಾನ್‌ ಉಪಯೋಗಿಸಿದ ಅನುಭವ ಇಲ್ಲದಿರೆ ಅದನ್ನು ಕಲಿಯುವುದು ಸುಲಭವಿದೆ. ತಿಳಿದಿವರ ಹತ್ತಿರ ೫ ನಿಮಿಷಗಳಲ್ಲಿ ತೋರಿಸಿಕೊಂಡು ಕಲಿಯಿರಿ ಇಲ್ಲವೇ ಯೂಟ್ಯೂಬಿನಲ್ಲಿ ಈ ಸಂಬಂಧಿ ವಿಡಿಯೋಗಳನ್ನು ನೋಡಿ ಕಲಿಯಿರಿ. ಉದಾ: https://www.youtube.com/watch?v=LUQDCUl1L4g

ನಿಮ್ಮ ಸ್ವಯಂಸೇವೆಯ ಸಹಾಯವನ್ನೇ ನಂಬಿಕೊಂಡಿದ್ದೇವೆ.

ಸಂಪಾದಕ ಮಂಡಳಿ ಪ್ರಸಂಗಪ್ರತಿಸಂಗ್ರಹ ಯೋಜನೆ

ವಿಶ್ವಸ್ಥರುಯಕ್ಷವಾಹಿನಿ ಪ್ರತಿಷ್ಠಾನ

ಸಂಪರ್ಕ ವಿವರ:

ಈಮೈಲ್‌ : prasangaprathisangraha@gmail.com

ಮೊಬೈಲ್:‌ ನಟರಾಜ ಉಪಾಧ್ಯ – 9632824391 ಅಶ್ವಿನಿ ಹೊದಲ - 9686112237
Share:

ಸುಮಾರು ೫೦ ಪ್ರಸಂಗಗಳ ಸ್ಕ್ಯಾನ್‌ ಆಗಿ ಮೊದಲ ಪ್ರಸಂಗ ಪ್ರತಿ ಸ್ಕ್ಯಾನ್‌ ಕಮ್ಮಟ ಸಂಪನ್ನ

ಬರೇ ೫ ಜನರ ಸ್ವಯಂಸೇವೆ ಸಿಕ್ಕರೂ ಸುಮಾರು ೫೦ ಪ್ರಸಂಗಗಳ ಸ್ಕ್ಯಾನ್‌ ಒಮ್ಮೆಲೇ ಆಗಿಹೋಗುವ ಮೂಲಕ ಮೊದಲ ಪ್ರಸಂಗಸ್ಕ್ಯಾನ್‌ ಕಮ್ಮಟವು ಫಲಕಾರಿಯಾಗಿ ಸಂಪನ್ನವಾಯಿತು.

ಲ. ನಾ. ಭಟ್ಟರ ಸಂಗ್ರಹದಲ್ಲಿನ ನೂರಕ್ಕಿಂತ ಹೆಚ್ಚು ಪ್ರಸಂಗಗಳಲ್ಲಿ ಇನ್ನೂ ಐವತ್ತು ಉಳಿದೇ ಹೋಯಿತು. ಐದೇ ಜನರಿದ್ದ ಕಾರಣ ಲ. ನಾ. ಭಟ್ಟರ ಮನೆಯಲ್ಲೇ ಉಳಿದೆವು, ಕ್ಲಬ್‌ ಹೌಸಿಗೆ ಹೋಗುವ ಯೋಜನೆಯನ್ನು ಬದಿಗಿಟ್ಟೆವು. ಸುಮಾರು ೪ ಗಂಟೆಗಳ ಕಾಲ ನಡೆದ ಸೇವೆಯಲ್ಲಿ ಸರಾಸರಿಯಾಗಿ ಒಬ್ಬೊಬ್ಬರು ಹತ್ತು ಪ್ರಸಂಗ ಸ್ಕ್ಯಾನ್‌ ಮಾಡಿದೆವು, ಉಳಿದ ಸಮಯದಲ್ಲಿ ರಾಗಿ ಮಾಲ್ಟ್‌, ಚಾ, ಚಕ್ಕುಲಿ, ಕೋಡುಬಳೆ, ಮುಂಡಕ್ಕಿ ಉಪ್ಕರಿ, ಚಾಕಲೇಟುಗಳ ಸೇವೆ (ಸೇವನೆ) ಮಾಡುತ್ತಾ ಯಕ್ಷಗಾನದ ವಿದ್ಯಮಾನಗಳ ಸುತ್ತ ಹರಟುತ್ತಾ ದಣಿವಾಗದೇ ಕಳೆದೆವು, ಮುಂದಿನ ಕಮ್ಮಟವನ್ನು ಮತ್ತೆ ನಿರೀಕ್ಷಿಸುವಷ್ಟು ಯಶಸ್ಸನ್ನು ಕಂಡೆವು.

 ಲ. ನಾ. ಭಟ್ಟರ ಜೊತೆಗೆ ಅವರ ಯಕ್ಷಪ್ರೇಮಿ ಸ್ನೇಹಿತ ಉಲ್ಲಾಸ್‌ ಇದ್ದರು. ಯಕ್ಷವಾಹಿನಿಯ ಖಾಯಂ ಸ್ವಯಂಸೇವಕರಾದ  ಅಶ್ವಿನಿ ಹೊದಲ, ವಸುಮತಿ, ಮತ್ತು ನಟರಾಜ ಉಪಾಧ್ಯರೂ ಸೇರಿದರು. ಲ.ನಾ. ಭಟ್ಟರ ತಾಯಿ ಮತ್ತು ಮಡದಿ ಅವರು ಚಾ ತಿಂಡಿಗಳ ಮೂಲಕ ಸೇರಿದವರ ಅತಿಥಿ ಸತ್ಕಾರವನ್ನು ಯಥೇ‍ಚ್ಛವಾಗಿ ಮಾಡಿದರು, ಲ. ನಾ. ಭಟ್ಟರು ಇಬ್ಬರು ಕುವರರು ಲವ ಕುಶರಂತೆ ಲೀಲೆಗಳಿಂದ ರಂಜಿಸಿದರು. ಈ ಕಮ್ಮಟದ ಸುತ್ತ ಸಾಕಷ್ಟು ದುಡಿದ ಎಲ್ಲರಿಗೂ ವಿಶೇಷವಾಗಿ ಆತಿಥೇಯರಿಗೆ ಧನ್ಯವಾದಗಳು.
ಆತಿಥೇಯರನ್ನು ಗುರುತಿಸಿ.

ಇನ್ನೂ ಸ್ವಯಂಸೇವಕರು ಬಂದಿದ್ದರೆ ನಮ್ಮ ಬತ್ತಳಕೆಯಲ್ಲಿ ಇನ್ನೂ ೧೫೦ ಪ್ರಸಂಗಗಳು ಕಾದುಕೊಂಡು ಇದ್ದವು, ಅವುಗಳ ಸ್ಕ್ಯಾನಿಂಗಿಗಾಗಿ ಕೂಡಲೇ ಇನ್ನೊಂದು ಕಮ್ಮಟವನ್ನು ಮಾಡುವ ಬಯಕೆ ನಮ್ಮದು, ಸ್ವಯಂಸೇವಕರು ನಮ್ಮನ್ನು ಮುಂದಿನ ಬಾರಿ ಸೇರುವಿರಾ? ಮುಂದಿನ ಬಾರಿ ನಗರದ ಮಧ್ಯಕ್ಕೆ ಹತ್ತಿರವಾಗಿಯೇ ಈ ಕಮ್ಮಟವನ್ನು ಏರ್ಪಡಿಸುವೆವು.
ಪ್ರಸಂಗ ಸ್ಕ್ಯಾನಿಂಗ್‌ ವೀರರು

ಇನ್ನು ಕೆಲವೇ ದಿನಗಳಲ್ಲಿ ಇಲ್ಲಿ ಸ್ಕ್ಯಾನ್‌ ಮಾಡಿದ ಪ್ರಸಂಗಗಳು ನಿಮಗೆ ನಮ್ಮ ಸಂಗ್ರಹದ ಮೂಲಕ ಪೂರ್ಣವಾಗಿ ಲಭ್ಯ.

ಈ ಕೆಳಗಿನ ಕೊಂಡಿಯ ಮೂಲಕ ನಮ್ಮ ಈವರೆಗಿನ ಪ್ರಸಂಗಪ್ರತಿಗಳ ಸಂಗ್ರಹ ನೋಡಿರಿ.
ಪ್ರಸಂಗಪ್ರತಿಸಂಗ್ರಹ ಕೋಷ್ಟಕಕ್ಕಾಗಿ ಕೊಂಡಿ ಇದುಇದನ್ನೇ ಒತ್ತಿರಿ.

ಮತ್ತೊಮ್ಮೆ ಈ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು
- ನಟರಾಜ ಉಪಾಧ್ಯ
ಪ್ರಸಂಗಪ್ರತಿ ಸಂಗ್ರಹ ಯೋಜನೆ ಹಾಗೂ ಯಕ್ಷವಾಹಿನಿ ಸಂಸ್ಥೆಯ ಪರವಾಗಿ

Share:

ಸಾಮೂಹಿಕ ಪ್ರಸಂಗ ಸ್ಕ್ಯಾನಿಂಗ್ ಕಮ್ಮಟದಲ್ಲಿ ನಮ್ಮನ್ನು ಸೇರಿಕೊಳ್ಳಲು ಸವಿನಯ ಆಮಂತ್ರಣ

ಪ್ರಸಂಗ ಪುಸ್ತಕಗಳನ್ನು ತಾಳ್ಮೆಯಿಂದ ಸ್ಕ್ಯಾನ್‌ ಮಾಡುವಲ್ಲಿ ತಾನೇ ಮುಂದೆ ಬಂದು ತಾಯಿಯೊಂದಿಗೆ ಸಹಕರಿಸುತ್ತಿರುವ ಅಮೂಲ್ಯ ಆರ್.

ಪ್ರಸಂಗಪ್ರತಿಸಂಗ್ರಹ ಯೋಜನೆಯಡಿ ಪ್ರತಿಗಳ ಸಂಖ್ಯೆ ೫೦೦ ಪ್ರತಿಗಳ ಗಡಿ ದಾಟಿ ೬೦೦ಕ್ಕೆ ಹತ್ತಿರವಾಗುತ್ತಿದೆ. ಆದರೆ ಸುಮಾರು ೪,೦೦೦ ಪ್ರತಿಗಳ ದೂರದ ಗುರಿ ಮುಟ್ಟಬೇಕಾದರೆ ನಮ್ಮ ಸ್ವಯಂಸೇವೆಯ ಒಗ್ಗಟ್ಟಿನ ಕೆಲಸ ಹೆಚ್ಚೆಚ್ಚು ಆಗಬೇಕಾಗಿದೆ. ಈ ಪ್ರಯುಕ್ತ ಪ್ರಾಯೋಗಿಕವಾಗಿ  ಸಾಮೂಹಿಕ ಪ್ರಸಂಗ ಸ್ಕ್ಯಾನಿಂಗ್ ಕಮ್ಮಟವನ್ನು ನಡೆಸುತ್ತಿದ್ದೇವೆ.   

ನಿಮ್ಮೊಂದಿಗಿರುವ ಸ್ಪಷ್ಟವಾಗಿ ಸ್ಕ್ಯಾನ್ ಮಾಡಬಲ್ಲ  ಸ್ಮಾರ್ಟ್ ಫೋನುಗಳೇ ಪರಿಣಾಮಕಾರಿ ಆಯುಧಗಳಾಗಿ ಸಹಕರಿಸಲಿವೆ.  ಯಕ್ಷಪ್ರೇಮಿ ಸ್ವಯಂಸೇವಕರೆಲ್ಲಾ ಅಂದು ನಮ್ಮೊಂದಿಗೆ ಕೆಲವು ಗಂಟೆಗಳ ಕಾಲ ಸೇರಿ ಸಹಕರಿಸಿ.  ಇತ್ತ ತಲೆ ತಗ್ಗಿಸಿ ಕೆಲಸ ಮಾಡುತ್ತಾ, ಹಿನ್ನಲೆಯಲ್ಲಿ ಸುಶ್ರಾವ್ಯ ಭಾಗವತಿಕೆ ಕೇಳುತ್ತಾ, ನಾವೆಲ್ಲಾ ಬೇರೆಬೇರೆಯಾಗಿ ತಂದಿರುವ ಸ್ವಾದಮಡಕೆಗಳಿಂದ (pot luck) ರುಚಿಯಾದ ಕುರುಕಲು ತಿಂಡಿಗಳನ್ನು ತಿನ್ನುತ್ತಾ, ಅತಿಥೇಯರು ಕೊಡುವ ಚಾ/ಕಾಫಿ ಸವಿಯುತ್ತ, ಪ್ರೀತಿ, ಸ್ನೇಹ, ಸೇವೆ, ಸವಿ ಮಾತುಗಳು ಮತ್ತು ಉತ್ಸಾಹ ತುಂಬಿದ ವಾತಾವರಣವನ್ನು ನಾವೇ ಸೃಷ್ಟಿಸಿಕೊಂಡು ಕೆಲವು ಗಂಟೆಗಳ ಕಾಲ ಮೆರೆದು ಅದರಲ್ಲಿ ಒಮ್ಮೆ ಮರೆತು ಹೋಗೋಣ!

ಯಾವತ್ತು:ಇದೇ ಶನಿವಾರ, ಡಿಸೆಂಬರ್ ೭ನೇ ತಾರೀಖು, ೨೦೧೯
ಯಾವಾಗ:೨ ಘಂಟೆ ಮಧ್ಯಾಹ್ನದಿಂದ ಸಂಜೆ ೬ ಘಂಟೆಯ ತನಕ (ಮಧ್ಯಾಹ್ನದ ಊಟ ಮಾಡಿಕೊಂಡೇ ಬನ್ನಿ)
ಎಲ್ಲಿ:ಯಕ್ಷಪ್ರೇಮಿ, ಯಕ್ಷಸೇವಕ ಲ. ನಾ. ಭಟ್ಟರ ಮನೆ (ಅಪಾರ್ಟ್ಮೆಂಟ್)
GA 35, Sowparnika Chandrakantha PHASE 1
V. Kallahalli Main Rd, Volagerekallahalli, Karnataka 562125
ಸ್ಥಳ ನಕ್ಷೆ: https://maps.app.goo.gl/tMf9GuWGN94qnkTQ6

ನೀವು ಬರುವುದನ್ನು ಲ. ನಾ. ಭಟ್ಟರಿಗೆ ಮೊದಲೇ ತಿಳಿಸಿ ಖಾತ್ರಿಗೊಳಿಸಿ. ಅವರ ದೂರವಾಣಿ: 7760823455

ನೀವು ಹೊರಡುವ ಮುನ್ನ: ಈವರೆಗೆ ಸ್ಕ್ಯಾನ್ ಆಗದ ನಿಮ್ಮಲ್ಲಿರುವ ಅಪರೂಪದ ಪ್ರಸಂಗ ಪುಸ್ತಕಗಳಿದ್ದರೆ ಅವುಗಳನ್ನು ಹೊತ್ತು ತನ್ನಿ. ಸ್ಮಾರ್ಟ್ ಫೋನ್, ಚಾರ್ಜರ್, ಪವರ್ ಬ್ಯಾಂಕುಗಳನ್ನು ಹಿಡಿದುಕೊಂಡೇ ಬನ್ನಿ.

ಯಕ್ಷಗಾನಕ್ಕಾಗಿ ಅಳಿಲು ಸೇವೆಗಳು ಸೇರಿ ನೆಳಲು ಸೇವೆಯಾಗುವತ್ತ ನೀವೂ ಕೈಜೋಡಿಸಲು ಇದೊಂದು ಅಪೂರ್ವ ಅವಕಾಶ!

ನಿಮ್ಮ ಸಹಕಾರಕ್ಕೆ ವಂದಿಸುವ,

- ನಟರಾಜ ಉಪಾಧ್ಯ, ಪ್ರಸಂಗಪ್ರತಿಸಂಗ್ರಹ ಯೋಜನೆ ಹಾಗೂ ಯಕ್ಷವಾಹಿನಿ (ರಿ) ಸಂಸ್ಥೆಯ ಪರವಾಗಿ

Share:

ಹೆಚ್ಚು ವೀಕ್ಷಣೆಯಾದವು

Powered by Blogger.

ಹೊಸತು..

ನೀವೂ ಪಾಲ್ಗೊಳ್ಳಿ

  • ನಮ್ಮ ಯೋಜನೆಗಳಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳಿ
  • ನಿಮ್ಮ ಅಮೂಲ್ಯ ಸಂಗ್ರಹಗಳನ್ನು ಡಿಜಿಟಲೀಕರಣಗೊಳಿಸುವುದಕ್ಕಾಗಿ ನಮ್ಮನ್ನು ಸಂಪರ್ಕಿಸಿ
  • ತಾಂತ್ರಿಕ ಪರಿಣತಿ, ಕಂಪ್ಯೂಟರ್ ಬೆರಳಚ್ಚು ಪರಿಣತಿ, ಪ್ರತಿ ಪರಿಶೀಲನೆ ಇತ್ಯಾದಿ ಕುಶಲತೆಯಿದ್ದ ಯಕ್ಷಗಾನಾಸಕ್ತರು ನಮ್ಮ ಯೋಜನೆಗಳಲ್ಲಿ ಕೈಜೋಡಿಸಬಹುದು
  • ಸಂಪರ್ಕ ಆಯ್ಕೆಯ ಮೂಲಕ ನಮಗೊಂದು ಸಂದೇಶ ಕಳುಹಿಸಿ