ಸಾಮೂಹಿಕ ಪ್ರಸಂಗ ಸ್ಕ್ಯಾನಿಂಗ್ ಕಮ್ಮಟದಲ್ಲಿ ನಮ್ಮನ್ನು ಸೇರಿಕೊಳ್ಳಲು ಸವಿನಯ ಆಮಂತ್ರಣ



ಪ್ರಸಂಗ ಪುಸ್ತಕಗಳನ್ನು ತಾಳ್ಮೆಯಿಂದ ಸ್ಕ್ಯಾನ್‌ ಮಾಡುವಲ್ಲಿ ತಾನೇ ಮುಂದೆ ಬಂದು ತಾಯಿಯೊಂದಿಗೆ ಸಹಕರಿಸುತ್ತಿರುವ ಅಮೂಲ್ಯ ಆರ್.

ಪ್ರಸಂಗಪ್ರತಿಸಂಗ್ರಹ ಯೋಜನೆಯಡಿ ಪ್ರತಿಗಳ ಸಂಖ್ಯೆ ೫೦೦ ಪ್ರತಿಗಳ ಗಡಿ ದಾಟಿ ೬೦೦ಕ್ಕೆ ಹತ್ತಿರವಾಗುತ್ತಿದೆ. ಆದರೆ ಸುಮಾರು ೪,೦೦೦ ಪ್ರತಿಗಳ ದೂರದ ಗುರಿ ಮುಟ್ಟಬೇಕಾದರೆ ನಮ್ಮ ಸ್ವಯಂಸೇವೆಯ ಒಗ್ಗಟ್ಟಿನ ಕೆಲಸ ಹೆಚ್ಚೆಚ್ಚು ಆಗಬೇಕಾಗಿದೆ. ಈ ಪ್ರಯುಕ್ತ ಪ್ರಾಯೋಗಿಕವಾಗಿ  ಸಾಮೂಹಿಕ ಪ್ರಸಂಗ ಸ್ಕ್ಯಾನಿಂಗ್ ಕಮ್ಮಟವನ್ನು ನಡೆಸುತ್ತಿದ್ದೇವೆ.   

ನಿಮ್ಮೊಂದಿಗಿರುವ ಸ್ಪಷ್ಟವಾಗಿ ಸ್ಕ್ಯಾನ್ ಮಾಡಬಲ್ಲ  ಸ್ಮಾರ್ಟ್ ಫೋನುಗಳೇ ಪರಿಣಾಮಕಾರಿ ಆಯುಧಗಳಾಗಿ ಸಹಕರಿಸಲಿವೆ.  ಯಕ್ಷಪ್ರೇಮಿ ಸ್ವಯಂಸೇವಕರೆಲ್ಲಾ ಅಂದು ನಮ್ಮೊಂದಿಗೆ ಕೆಲವು ಗಂಟೆಗಳ ಕಾಲ ಸೇರಿ ಸಹಕರಿಸಿ.  ಇತ್ತ ತಲೆ ತಗ್ಗಿಸಿ ಕೆಲಸ ಮಾಡುತ್ತಾ, ಹಿನ್ನಲೆಯಲ್ಲಿ ಸುಶ್ರಾವ್ಯ ಭಾಗವತಿಕೆ ಕೇಳುತ್ತಾ, ನಾವೆಲ್ಲಾ ಬೇರೆಬೇರೆಯಾಗಿ ತಂದಿರುವ ಸ್ವಾದಮಡಕೆಗಳಿಂದ (pot luck) ರುಚಿಯಾದ ಕುರುಕಲು ತಿಂಡಿಗಳನ್ನು ತಿನ್ನುತ್ತಾ, ಅತಿಥೇಯರು ಕೊಡುವ ಚಾ/ಕಾಫಿ ಸವಿಯುತ್ತ, ಪ್ರೀತಿ, ಸ್ನೇಹ, ಸೇವೆ, ಸವಿ ಮಾತುಗಳು ಮತ್ತು ಉತ್ಸಾಹ ತುಂಬಿದ ವಾತಾವರಣವನ್ನು ನಾವೇ ಸೃಷ್ಟಿಸಿಕೊಂಡು ಕೆಲವು ಗಂಟೆಗಳ ಕಾಲ ಮೆರೆದು ಅದರಲ್ಲಿ ಒಮ್ಮೆ ಮರೆತು ಹೋಗೋಣ!

ಯಾವತ್ತು:ಇದೇ ಶನಿವಾರ, ಡಿಸೆಂಬರ್ ೭ನೇ ತಾರೀಖು, ೨೦೧೯
ಯಾವಾಗ:೨ ಘಂಟೆ ಮಧ್ಯಾಹ್ನದಿಂದ ಸಂಜೆ ೬ ಘಂಟೆಯ ತನಕ (ಮಧ್ಯಾಹ್ನದ ಊಟ ಮಾಡಿಕೊಂಡೇ ಬನ್ನಿ)
ಎಲ್ಲಿ:ಯಕ್ಷಪ್ರೇಮಿ, ಯಕ್ಷಸೇವಕ ಲ. ನಾ. ಭಟ್ಟರ ಮನೆ (ಅಪಾರ್ಟ್ಮೆಂಟ್)
GA 35, Sowparnika Chandrakantha PHASE 1
V. Kallahalli Main Rd, Volagerekallahalli, Karnataka 562125
ಸ್ಥಳ ನಕ್ಷೆ: https://maps.app.goo.gl/tMf9GuWGN94qnkTQ6

ನೀವು ಬರುವುದನ್ನು ಲ. ನಾ. ಭಟ್ಟರಿಗೆ ಮೊದಲೇ ತಿಳಿಸಿ ಖಾತ್ರಿಗೊಳಿಸಿ. ಅವರ ದೂರವಾಣಿ: 7760823455

ನೀವು ಹೊರಡುವ ಮುನ್ನ: ಈವರೆಗೆ ಸ್ಕ್ಯಾನ್ ಆಗದ ನಿಮ್ಮಲ್ಲಿರುವ ಅಪರೂಪದ ಪ್ರಸಂಗ ಪುಸ್ತಕಗಳಿದ್ದರೆ ಅವುಗಳನ್ನು ಹೊತ್ತು ತನ್ನಿ. ಸ್ಮಾರ್ಟ್ ಫೋನ್, ಚಾರ್ಜರ್, ಪವರ್ ಬ್ಯಾಂಕುಗಳನ್ನು ಹಿಡಿದುಕೊಂಡೇ ಬನ್ನಿ.

ಯಕ್ಷಗಾನಕ್ಕಾಗಿ ಅಳಿಲು ಸೇವೆಗಳು ಸೇರಿ ನೆಳಲು ಸೇವೆಯಾಗುವತ್ತ ನೀವೂ ಕೈಜೋಡಿಸಲು ಇದೊಂದು ಅಪೂರ್ವ ಅವಕಾಶ!

ನಿಮ್ಮ ಸಹಕಾರಕ್ಕೆ ವಂದಿಸುವ,


- ನಟರಾಜ ಉಪಾಧ್ಯ, ಪ್ರಸಂಗಪ್ರತಿಸಂಗ್ರಹ ಯೋಜನೆ ಹಾಗೂ ಯಕ್ಷವಾಹಿನಿ (ರಿ) ಸಂಸ್ಥೆಯ ಪರವಾಗಿ

Share:

No comments:

Post a Comment

ಹೆಚ್ಚು ವೀಕ್ಷಣೆಯಾದವು

Powered by Blogger.

ಹೊಸತು..

ನೀವೂ ಪಾಲ್ಗೊಳ್ಳಿ

  • ನಮ್ಮ ಯೋಜನೆಗಳಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳಿ
  • ನಿಮ್ಮ ಅಮೂಲ್ಯ ಸಂಗ್ರಹಗಳನ್ನು ಡಿಜಿಟಲೀಕರಣಗೊಳಿಸುವುದಕ್ಕಾಗಿ ನಮ್ಮನ್ನು ಸಂಪರ್ಕಿಸಿ
  • ತಾಂತ್ರಿಕ ಪರಿಣತಿ, ಕಂಪ್ಯೂಟರ್ ಬೆರಳಚ್ಚು ಪರಿಣತಿ, ಪ್ರತಿ ಪರಿಶೀಲನೆ ಇತ್ಯಾದಿ ಕುಶಲತೆಯಿದ್ದ ಯಕ್ಷಗಾನಾಸಕ್ತರು ನಮ್ಮ ಯೋಜನೆಗಳಲ್ಲಿ ಕೈಜೋಡಿಸಬಹುದು
  • ಸಂಪರ್ಕ ಆಯ್ಕೆಯ ಮೂಲಕ ನಮಗೊಂದು ಸಂದೇಶ ಕಳುಹಿಸಿ