ಮುಡಿಪಿನ ಸ್ವಯಂಸೇವೆಯಿಂದಲೇ ಮಿಂಚುತ್ತಿರುವ ಯಕ್ಷವಾಹಿನಿಯ ಯಕ್ಷಾಭಿಮಾನಿ ಯಕ್ಷಸೇವಕರ ಸಮೂಹದ ಯಶಸ್ಸಿನ ಮುಡಿಗೆ ಇನ್ನೊಂದು ಚಿನ್ನದ ಗರಿ ಏರಿದೆ. ಯಕ್ಷಗಾನದ ಪ್ರಸಂಗಪ್ರತಿಸಂಗ್ರಹ ಯೋಜನೆಯಲ್ಲಿ ಸಂಗ್ರಹಿಸಲ್ಪಟ್ಟ ಪ್ರಸಂಗಪ್ರತಿಗಳನ್ನು ಯಕ್ಷಪ್ರೇಮಿಗಳಿಗೆ ಉಚಿತವಾಗಿ ಲಭಿಸುವಂತೆ ಮಾಡುವುದರ ಜೊತೆಗೇ ಸಂಬಂಧಿತ ಯಕ್ಷಪ್ರಸಂಗಕೋಶ ಯೋಜನೆಯಲ್ಲಿಯೂ ಪ್ರಕಟವಾಗಿರುವ ಪ್ರಸಂಗ ಪುಸ್ತಕಗಳ ವಿದ್ಯುನ್ಮಾನ ಪ್ರತಿಗಳನ್ನು ಸುಲಭವಾಗಿ ಆಸಕ್ತರಿಗೆ ಲಭ್ಯವಾಗುವಂತೆ ಮಾಡುವುದಕ್ಕೋಸ್ಕರ ಆಂಡ್ರಾಯ್ಡ್ ಆಪ್ ಅನ್ನು (android app) ಸಿದ್ಧಪಡಿಸಲಾಗಿ ಬಿಡುಗಡೆ ಮಾಡಲಾಗಿದೆ.
ಇದನ್ನು ನಿಮ್ಮ ಮೊಬೈಲ್ ನಲ್ಲಿ ಅನುಸ್ಥಾಪಿಸಿಕೊಳ್ಳುವ ಮೂಲಕ ಎರಡೂ ಯೋಜನೆಗಳಿಗೆ ಸಂಬಂಧಿಸಿದ ಎಲ್ಲಾ ಪ್ರಸಂಗಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು. (ಪ್ರಸಂಗಪ್ರತಿಸಂಗ್ರಹ ಯೋಜನೆ: ಅಂತರಜಾಲದ ಮೂಲಕ ಉಚಿತ ಪ್ರಸಾರಕ್ಕಾಗಿಯೇ, ಹಕ್ಕು ಸ್ವಾಮ್ಯದವರ ಅನುಮತಿಯ ಮೇರೆಗೆ,ಬೇರೆ ಬೇರೆ ಪ್ರಕಾಶನಗಳ ಯಾ ಹಸ್ತಪ್ರತಿಗಳ ಸ್ಕ್ಯಾನ್ ಪ್ರತಿಗಳ ಸಂಗ್ರಹ; ಯಕ್ಷಪ್ರಸಂಗಕೋಶ ಯೋಜನೆ: ಪ್ರಸಂಗ ಕವಿಯ ಮೂಲ ಹಕ್ಕು ಸ್ವಾಮ್ಯ ಹಾಗೂ ಅನುಮತಿಯ ಪರಿಧಿಯಲ್ಲೇ ಯಕ್ಷವಾಹಿನಿಯ ಸಮೂಹದಿಂದ ವಿದ್ಯುನ್ಮಾನ ಪ್ರತಿಯಾಗಿ ಮಾರ್ಪಟ್ಟು, ಯಕ್ಷಗಾನ ಸಾಹಿತ್ಯ ಹಾಗೂ ಛಂದಸ್ಸಿನ ತಜ್ಞರಿಂದ ಬೇಕಿದ್ದಲ್ಲಿ ಪರಿಷ್ಕೃತಗೊಂಡು ಅಂತರಜಾಲದಲ್ಲಿ ಉಚಿತ ಪ್ರಸಾರಕ್ಕಾಗಿಯೇ ಪ್ರಕಾಶನಗೊಂಡ ಪ್ರಸಂಗಗಳ ಕೋಶ)
ಆಪ್ ನ ಕೊಂಡಿ :
ಈ ಆಪ್ ನ ಪರಿಕಲ್ಪನೆ, ನಿರ್ಮಾಣ ಮತ್ತು ನಿರ್ವಹಣೆಯ ಭಾರವನ್ನು ಪೂರ್ಣ ಹೊತ್ತು ತಮ್ಮದೇ ಖರ್ಚಿನಲ್ಲಿ ಗೂಗಲ್ ಪ್ಲೇ ಸ್ಟೋರಿನಲ್ಲಿ ಸ್ಥಾಪಿಸಿ ಎಂದಿನ ಯಕ್ಷಸೇವೆಯ ಕೈಂಕರ್ಯದಲ್ಲಿ ಇದೊಂದು ಸಾಮಾನ್ಯ ಹೆಜ್ಜೆ ಎಂಬುದಾಗಿ ಹೆಗ್ಗಳಿಕೆ ಒಲ್ಲದ ಹಿರಣ್ಯಮಯಿಯೇ ಲ. ನಾ. ಭಟ್ (ಲಕ್ಷ್ಮೀನಾರಾಯಣ ಕೆ. ಜೆ.). ಇವರೊಂದಿಗೆ ಇದರ ಗುಣಮಟ್ಟದ ಉತ್ತುಂಗಕ್ಕಾಗಿ ಅವರಿಗೆ ಭುಜ ಕೊಟ್ಟು ಶ್ರಮಿಸಿದವರು ಅವಿನಾಶ್ ಬೈಪಡಿತ್ತಾಯ ಮತ್ತು ಅಶ್ವಿನಿ ಹೊದಲ. ಇವೆರೆಲ್ಲರಿಗೆ ಅಭಿಮಾನದ ಅಭಿನಂದನೆಗಳು ಮತ್ತು ವಿನಯಪೂರ್ವಕ ವಂದನೆಗಳು.
ವಿ. ಸೂ.: ಈಗಾಗಲೇ ಇದರ ಪ್ರಾಯೋಗಿಕ ಆವೃತ್ತಿಯನ್ನು ಅನುಸ್ಥಾಪಿಸಿಕೊಂಡಿದ್ದಲ್ಲಿ ಅದನ್ನು uninstall ಮಾಡಿದ ಬಳಿಕ ಗೂಗಲ್ ಪ್ಲೇಸ್ಟೋರ್ ನಿಂದ ಹೊಸ ಆವೃತ್ತಿಯನ್ನು ಅನುಸ್ಥಾಪಿಸಿಕೊಳ್ಳಿ.
ಮತ್ತೊಮ್ಮೆ ಈ ಯಶಸ್ಸಿಗಾಗಿ ನಮ್ಮ ಸಮೂಹದ ಎಲ್ಲರಿಗೂ ವಂದನೆ / ಅಭಿನಂದನೆಗಳೊಂದಿಗೆ,
- - ನಟರಾಜ ಉಪಾಧ್ಯ, ಪ್ರಸಂಗಪ್ರತಿಸಂಗ್ರಹ ಯೋಜನೆ, ಯಕ್ಷಪ್ರಸಂಗಕೋಶ ಯೋಜನೆ, ಯಕ್ಷವಾಹಿನಿ ಸಂಸ್ಥೆ ಮತ್ತು ಸಮೂಹದ ಎಲ್ಲರ ಪರವಾಗಿ ಈ ಯಶಸ್ಸಿನ ಸಂತಸದಲ್ಲಿ ಸಮಭಾಗಿ.
Maadari kaarya
ReplyDeleteನಟರಾಜ ಉಪಾದ್ಯರು ತಿಳಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುವುದರೊಂದಿಗೆ ಇವರೆಲ್ಲರಿಗೂ ಪ್ರೇರಕಶಕ್ತಿಯಾದ ಉಪಾದ್ಯರಿಗೂ ಮನದುಂಬಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ReplyDeleteಬಹಳ ಉತ್ತಮ ಮತ್ತು ಯಕ್ಷಗಾನ ಕಲಾವಿದರಿಗೆ ಉಪಯುಕ್ತವಾಗುವಂತಹ ಕೆಲಸ. ಇನ್ನೂ ಹೆಚ್ಚು ಪ್ರಸಂಗ ಪುಸ್ತಕಗಳನ್ನು ಈ ಕೊಂಡಿಗೆ ಸೇರಿಸುವ ಕೆಲಸವಾಗಲಿ. ಮಾತ್ರವಲ್ಲದೆ ಅರ್ಥ ಸಹಿತ ಪುಸ್ತಕಗಳನ್ನು ಇಲ್ಲಿ ಸೇರಿಸುವ ಕೆಲಸವಾದರೆ ಕಲಿಯುವವರಿಗೆ ತುಂಬಾ ಅನುಕೂಲವಾಗಬಹುದು
ReplyDeleteRamesh N Shetty, Kunjathur
How to take print out of books when we need
ReplyDeleteYou may download pdf copy of any prasanga from the blog (table) or from the app, later can get it printed. Sorry for the late reply!
DeleteWonderful work.
ReplyDeleteI have got one arthasahita prasanga pustaka Sri Krishna sandhana written in 1926 ,author arkula Subraya acharya.
Another prasanga bakthe hidimbe, bhima gatochaka kaalaga written by panakaje shamaraya acharya in 1960's.
Shall I send hard copies both to include them in yakshagana prasanga kosha ?
Pl furnish a postal address & mobile number...
Pl guide & enlighten me & oblige..
Umesha acharya gerukatte.
acharya grrukatte,
E mail id
umeshgerukatte@yahoo.com
Mobile
9481180340.
Thanks a lot. We will contact you.. Thank you for your support!
Delete