ಬರೇ ೪ ಜನರ ಸ್ವಯಂಸೇವೆ ಸಿಕ್ಕರೂ ಸುಮಾರು ೫೦ ಪ್ರಸಂಗಗಳ ಸ್ಕ್ಯಾನ್ ಒಮ್ಮೆಲೇ ಆಗಿಹೋಗುವ ಮೂಲಕ ನಾಲ್ಕನೇ ಪ್ರಸಂಗ ಸ್ಕ್ಯಾನ್ ಕಮ್ಮಟವು ಫಲಕಾರಿಯಾಗಿ ಸಂಪನ್ನವಾಯಿತು.
ನಟರಾಜ ಉಪಾಧ್ಯರ ಮನೆಯಲ್ಲಿ ನಡೆದ ಈ ಕಮ್ಮಟದಲ್ಲಿ ಡಾ. ಆನಂದರಾಮ ಉಪಾಧ್ಯರ ಸಂಗ್ರಹದ ಹೆಚ್ಚಿನ ಪ್ರಸಂಗ ಪುಸ್ತಕಗಳ ಸ್ಕ್ಯಾನ್ ಆದವು. ಡಾ. ಆನಂದರಾಮ ಉಪಾಧ್ಯ ಹಾಗೂ ರವಿ ಮಡೋಡಿಯವರ ಸಂಗ್ರಹದ ಪ್ರಸಂಗ ಪುಸ್ತಿಕೆಗಳ ಸ್ಕ್ಯಾನ್ ಮುಗಿಸಲು ಮುಂದಿನ ಕಮ್ಮಟವೇ ಬೇಕಾಗಬಹುದು.
ಈ ಕಮ್ಮಟದಲ್ಲಿ ಸ್ಕ್ಯಾನ್ ಆದ ಪ್ರಸಂಗಗಳು ಇನ್ನೊಂದು ವಾರದಲ್ಲೇ ಒಪ್ಪಗೊಂಡು ನಮ್ಮ ಸಂಗ್ರಹದಲ್ಲಿ ಸೇರಿ ಒಟ್ಟು ಸಂಗ್ರಹವು ೯೦೦ರ ಗಡಿ ದಾಟುವ ಶುಭ ಸಮಾಚಾರವನ್ನು ನಿರೀಕ್ಷಿಸಿರಿ.
ಪ್ರಸಂಗಪ್ರತಿಸಂಗ್ರಹ ಆಂಡ್ರೋಯ್ಡ್ ಆಪ್ ನ ಕೊಂಡಿ :
ಈ ಕಮ್ಮಟದಲ್ಲಿ ಅಮೂಲ್ಯ, ಅಶ್ವಿನಿ ಹೊದಲ, ವಸಂತಕೃಷ್ಣ ಪಟ್ಟಾಜೆ ಹಾಗೂ ನಟರಾಜ ಉಪಾಧ್ಯರ ಸ್ವಯಂಸೇವೆ ಸೇರಿಹೋಯಿತು. ಅಖಿಲಾ, ಆಶಾ ಹಾಗೂ ಶಾಲಿನಿ ವಾಸುದೇವ ಅವರ ಆತಿಥ್ಯದ ಸಹಕಾರ ಸಿಕ್ಕಿತು. ಮಧ್ಯಾಹ್ನದ ಊಟಕ್ಕೆ ಹೀರೆಕಾಯಿ ಚಟ್ಟಿ, ಪಲಾವ್, ಕೂಟು, ಸಾರು ಅಲ್ಲದೇ ಅಶ್ವಿನಿ ಅವರು ತಂದ ಲಾಡು, ಹೋಳಿಗೆ ಹಾಗೂ ಕೋಡುಬಳೆ ಕಳೆಕಟ್ಟಿತು.
Bahala olleya kelasa
ReplyDelete