ಪ್ರಸಂಗಪ್ರತಿ ಸಂಗ್ರಹ ಯೋಜನೆಯಡಿ ನಮ್ಮ ಸಂಗ್ರಹವು ೮೦೦ ಪ್ರತಿಗಳ ಗಡಿ ದಾಟಿ ೯೦೦ರತ್ತ ದಾಪುಗಾಲು ಇಡುತ್ತಿದೆ. ಆದರೆ ಸುಮಾರು ೪,೦೦೦ ಪ್ರತಿಗಳ ದೂರದ ಗುರಿ ಮುಟ್ಟಬೇಕಾದರೆ ನಮ್ಮ ಸ್ವಯಂಸೇವೆಯ ಒಗ್ಗಟ್ಟಿನ ಕೆಲಸ ಹೆಚ್ಚೆಚ್ಚು ಆಗಬೇಕಾಗಿದೆ. ಈ ಪ್ರಯುಕ್ತ ನಾಲ್ಕನೇ ಸಾಮೂಹಿಕ “ಪ್ರಸಂಗ ಸ್ಕ್ಯಾನಿಂಗ್ ಕಮ್ಮಟ” ವನ್ನು ಇದೇ ಭಾನುವಾರ, ಫೆಬ್ರವರಿ ೧೬, ೨೦೨೦ರಂದು ನಡೆಸುತ್ತಿದ್ದೇವೆ.
ನಿಮ್ಮೊಂದಿಗಿರುವ ಸ್ಪಷ್ಟವಾಗಿ ಸ್ಕ್ಯಾನ್ ಮಾಡಬಲ್ಲ ಸ್ಮಾರ್ಟ್ ಫೋನುಗಳೇ ಪರಿಣಾಮಕಾರಿ ಆಯುಧಗಳಾಗಿ ಸಹಕರಿಸಲಿವೆ. ಯಕ್ಷಪ್ರೇಮಿ ಸ್ವಯಂಸೇವಕರೆಲ್ಲಾ ಅಂದು ನಮ್ಮೊಂದಿಗೆ ಕೆಲವು ಗಂಟೆಗಳ ಕಾಲ ಸೇರಿ ಸಹಕರಿಸಿ. ಬೆಳಿಗ್ಗೆ ೧೦ ಘಂಟೆಯಿಂದ ಸಂಜೆ ೫ ರ ತನಕ ನಡೆಯುವ ಈ ಕಮ್ಮಟದಲ್ಲಿ ಭಾಗವಹಿಸುವವರಿಗೆ ಊಟ, ತಿಂಡಿ, ಕಾಫಿ / ಚಾಗಳ ವ್ಯವಸ್ಥೆ ಇರುತ್ತದೆ. ಕೆಲಸದ ಜೊತೆಗೆ ಯಕ್ಷಗಾನದ ವಾತಾವರಣ ಸೃಷ್ಟಿಸಿಕೊಂಡು ಸ್ವಲ್ಪ ಗಮ್ಮತ್ತು ಕೂಡಾ ಮಾಡೋಣ!
ಯಾವತ್ತು: ಇದೇ ಭಾನುವಾರ, ಫೆಬ್ರವರಿ ೧೬, ೨೦೨೦
ಯಾವಾಗ: ಬೆಳಿಗ್ಗೆ ೧೦ ಘಂಟೆಯಿಂದ ಮಧ್ಯಾಹ್ನ ೫ ಘಂಟೆಯ ತನಕ, ಶಕ್ತಿ ಉಳಿದವರಿಗೆ ಆರು ಘಂಟೆಯ ತನಕ ಎಳೆಯೋಣ
ಎಲ್ಲಿ: ಕತ್ರಿಗುಪ್ಪೆ ಪಕ್ಕದ ವಿವೇಕಾನಂದನಗರದ ನಟರಾಜ ಉಪಾಧ್ಯ ಅವರ ಮನೆ
#82, Ashrama, First Main, Vivekanandanagar, Katriguppe Main Road,
Bengaluru, Karnataka 560085 (Corner house on the right after Kaveri School)
ಸ್ಥಳ ನಕ್ಷೆ: Ashrama Location Map
ನೀವು ಬರುವುದನ್ನು ಮೊದಲೇ ತಿಳಿಸಿ ಖಾತ್ರಿಗೊಳಿಸಿ. ದೂರವಾಣಿ: 96328 24391
ನೀವು ಹೊರಡುವ ಮುನ್ನ: ಈವರೆಗೆ ಸ್ಕ್ಯಾನ್ ಆಗದ ನಿಮ್ಮಲ್ಲಿರುವ ಅಪರೂಪದ ಪ್ರಸಂಗ ಪುಸ್ತಕಗಳಿದ್ದರೆ ಅವುಗಳನ್ನು ಹೊತ್ತು ತನ್ನಿ. ಸ್ಮಾರ್ಟ್ ಫೋನ್, ಚಾರ್ಜರ್, ಪವರ್ ಬ್ಯಾಂಕುಗಳನ್ನು ಹಿಡಿದುಕೊಂಡೇ ಬನ್ನಿ.
ಯಕ್ಷಗಾನಕ್ಕಾಗಿ ನಿಮ್ಮ ಅಳಿಲು ಸೇವೆಗೆ ಇದೊಂದು ಅಪೂರ್ವ ಅವಕಾಶ!
ನಿಮ್ಮ ಸಹಕಾರಕ್ಕೆ ವಂದಿಸುವ,
- ನಟರಾಜ ಉಪಾಧ್ಯ, ಪ್ರಸಂಗಪ್ರತಿಸಂಗ್ರಹ ಯೋಜನೆ ಹಾಗೂ ಯಕ್ಷವಾಹಿನಿ (ರಿ) ಸಂಸ್ಥೆಯ ಪರವಾಗಿ
ಹಾಗೂ ಅಂದು ನಿಮ್ಮನ್ನು ಸ್ವಾಗತಿಸುವ ಅತಿಥೇಯರು
ಪ್ರಸಂಗಪ್ರತಿಸಂಗ್ರಹ ಆಂಡ್ರೋಯ್ಡ್ ಆಪ್ ನ ಕೊಂಡಿ :